ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ರಾಜನಾಥ್ ಸಿಂಗ್ 'ಇಂಗ್ಲೀಷ್‌' ವಿರೋಧಿ ಹೇಳಿಕೆಗೆ 'ಕೈ'ಖಂಡನೆ

'ಇಂಗ್ಲೀಷ್ ಭಾಷೆಯಿಂದ ಭಾರತಕ್ಕೆ ಭಾರಿ ಹಾನಿಯಾಗಿದೆ' ಎಂದಿದ್ದ ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ಅವರ ಹೇಳಿಕೆ...

Vishwanath S
Updated On : 20 Jul 2013, 2:29 am

ನವದೆಹಲಿ: 'ಇಂಗ್ಲೀಷ್ ಭಾಷೆಯಿಂದ ಭಾರತಕ್ಕೆ ಭಾರಿ ಹಾನಿಯಾಗಿದೆ' ಎಂದಿದ್ದ ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ಅವರ ಹೇಳಿಕೆ ಇದೀಗ ವಿವಾದಕ್ಕೆ ಕಾರಣವಾಗಿದ್ದು, ಬಿಜೆಪಿ ಅಧ್ಯಕ್ಷರ ಹೇಳಿಕೆಯನ್ನು ಕಾಂಗ್ರೆಸ್ ಖಂಡಿಸಿದೆ.

ರಾಜನಾಥ್ ಸಿಂಗ್‌ರ ಇಂಗ್ಲೀಷ್ ವಿರೋಧಿ ಹೇಳಿಕೆಯನ್ನು ಖಂಡಿಸಿರುವ ಕೇಂದ್ರ ವಾರ್ತಾ ಇಲಾಖೆ ಸಚಿವ ಮನೀಶ್ ತಿವಾರಿ, ದೇಶದ ಸಂಸ್ಕೃತಿಯನ್ನು ಭದ್ರಪಡಿಸುವಲ್ಲಿ ಇಂಗ್ಲೀಷ್ ಭಾಷೆ ಹೆಚ್ಚು ಪರಿಣಾಮಕಾರಿಯಾಗಿದೆ ಎಂಬುದನ್ನು ರಾಜನಾಥ್ ಸಿಂಗ್ ಮರೆತಂತಿದೆ ಎಂದು ತಿವಾರಿ ವ್ಯಂಗ್ಯವಾಡಿದ್ದಾರೆ.

ಶಾಲೆಗಳಲ್ಲಿ ಇಂಗ್ಲೀಷ್ ಭಾಷೆಯ ಕಲಿಕೆಯಿಂದಾಗಿಯೆ ನಮ್ಮ ದೇಶದಲ್ಲಿ ಇಂಟರ್‌ನೆಟ್ ಬಳಕೆ ಚಾಲನೆಗೆ ಬಂದಿದೆ. ಬಿಜೆಪಿಯ ವಿಷನ್ ಡಾಕ್ಯೂಮೆಂಟರಿಯಲ್ಲಿ ಕೇವಲ ಇಂಗ್ಲೀಷ್ ಭಾಷೆಯನ್ನು ಮಾತನಾಡುವವರನ್ನು ಮಾತ್ರ ಚಿತ್ರಿಸಿ ತೊರಿಸಿದೆ. ಒಂದು ಭಾಷೆ ಉತ್ತಮ ಮತ್ತೊಂದು ಭಾಷೆ ಅಲ್ಲ ಎಂದು ಬಿಜೆಪಿ ಬಿಂಬಿಸಲು ಮುಂದಾಗುತ್ತಿದೆ ಎಂದು ತಿವಾರಿ ಆರೋಪಿಸಿದ್ದಾರೆ.

ಇದೇ ವೇಳೆ, ಬಿಜೆಪಿ ಪಕ್ಷದ ಪ್ರತಿಯೊಬ್ಬರು ಸಂಕುಚಿತ ಮನೋಭಾವ ಹೊಂದಿದ್ದಾರೆ. ಹೀಗಾಗಿ ಅವರಿಗೆ ಯಾವುದೇ ಹೇಳಿಕೆಗಳನ್ನು ನೀಡುವ ಮುನ್ನ ಆಲೋಚಿಸಿ ಪರಮರ್ಶಿಸಿ ಹೇಳಿಕೆ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಕೇಂದ್ರ ಸಚಿವ ರಾಜೀವ್ ಶುಕ್ಲ ಅವರು ಸಹ ಸಿಂಗ್ ವಿರುದ್ಧ ಕಿಡಿಕಾರಿದ್ದಾರೆ.

ರಾಜನಾಥ್ ಸಿಂಗ್ ಅವರು ಗುರುವಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದ ಸಂದರ್ಭದಲ್ಲಿ, ಇಂಗ್ಲೀಷ್ ಭಾಷೆ ನಮ್ಮ ದೇಶದ ಸಂಸ್ಕೃತಿಯನ್ನು ಹಾಳುಮಾಡುತ್ತಿದೆ. ಅಲ್ಲದೆ ಹಿಂದಿನಿಂದ ನಡೆದುಕೊಂಡು ಬಂದಿದ್ದ ಆಚಾರ ವಿಚಾರಗಳು ಇಂದು ಇಂಗ್ಲೀಷ್ ಭಾಷೆಯ ವ್ಯಾಮೋಹದಿಂದಾಗಿ ತನ್ನ ಅಸ್ಥಿತ್ವ ಕಳದುಕೊಳ್ಳುತ್ತಿವೆ ಎಂದು ದೂರಿದ್ದರು. ಪ್ರಸ್ತುತ ಯುವಕರು ಸಹ ಇಂಗ್ಲೀಷ್ ಭಾಷೆಯ ದಾಸರಾಗುತ್ತಿದ್ದಾರೆ. ಹೀಗಾಗಿ ಕೇವಲ 14000 ಮಂದಿ ಮಾತ್ರ ಸಂಸ್ಕೃತದಲ್ಲಿ ಅಭ್ಯಾಸ ಮಾಡಿದ್ದಾರೆ ಎಂದು ಸಿಂಗ್ ಹೇಳಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement