ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಐಎಂ ರಚನೆಗೆ ಗುಜರಾತ್ ಗಲಭೆ ಕಾರಣ: ಶಕೀಲ್ ಅಹಮದ್

ಇಂಡಿಯನ್ ಮುಜಾಹಿದ್ದೀನ್ ಉಗ್ರ ಸಂಘಟನೆ ರಚನೆಗೆ 2002ರಲ್ಲಿ ನಡೆದ ಗುಜರಾತ್ ಗಲಭೆಯೇ ಕಾರಣ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ...

Mainashree
Updated On : 21 Jul 2013, 7:46 am

ನವದೆಹಲಿ: ಇಂಡಿಯನ್ ಮುಜಾಹಿದ್ದೀನ್ ಉಗ್ರ ಸಂಘಟನೆ(ಐಎಂ) ರಚನೆಗೆ 2002ರಲ್ಲಿ ನಡೆದ ಗುಜರಾತ್ ಗಲಭೆಯೇ ಕಾರಣ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶಕೀಲ್ ಅಹಮದ್ ಭಾನುವಾರ ಹೇಳಿದ್ದಾರೆ.

ಗುಜರಾತ್ ಗಲಭೆಯೇ ಐಎಂ ಸಂಘಟನೆ ಹುಟ್ಟಿಕೊಳ್ಳಲು ಕಾರಣ ಎಂದು ರಾಷ್ಟ್ರೀಯ ತನಿಖಾ ದಳ ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿದೆ ಎಂದು ಅವರು ತಿಳಿಸಿದ್ದಾರೆ.

ಭಾರತೀಯ ಜನತಾ ಪಕ್ಷ(ಬಿಜೆಪಿ) ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್‌ಎಸ್‌ಎಸ್) ಜಾತಿಯತೆಯಿಂದ ಹಿಂದೆ ಸರಿದಿಲ್ಲ. ಬಿಜೆಪಿ ಹಾಗೂ ಆರ್‌ಎಸ್‌ಎಸ್‌ನ ಕೋಮುವಾದಿ ಅಜೆಂಡವೇ ಭಯೋತ್ಪಾದನೆ ಸಂಘಟನೆ ರಚನೆಗೆ ಕಾರಣವಾಗಿದೆ ಎಂದು ಅವರು ದೂರಿದ್ದಾರೆ.

ಇಂತಹ ರಾಜಕೀಯ ಪಕ್ಷಗಳನ್ನು ಅಧಿಕಾರಕ್ಕೆ ತರಬಾರದು. ಯಾರಿಗೆ ಕೋಮುವಾದಿಗಳು ಮತ್ತು ಜಾತಿಯತೆ ಪಕ್ಷಗಳು ಬೇಡವೋ ಅವರೇ ಇಂತಹ ಪಕ್ಷ ಹಾಗೂ ಸಂಘಟನೆಗಳನ್ನು ರಾಜಕೀಯದಿಂದ ದೂರತಳ್ಳಬೇಕು ಎಂದು ಹೇಳಿದ್ದಾರೆ.

ಕೋಮುವಾದಿ ಅಜೆಂಡ ಹೊಂದಿರುವ ರಾಜಕೀಯ ಪಕ್ಷಗಳನ್ನು ಬಹಿಷ್ಕರಿಸುದರಿಂದ, ಐಎಂ ನಂತಹ ಉಗ್ರ ಸಂಘಟನೆ ರಚನೆಗೊಳ್ಳುವುದಿಲ್ಲ ಎಂದು ಹೇಳುವುದರ ಮೂಲಗ ಬಿಜೆಪಿ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

2002ರಲ್ಲಿ ನಡೆದ ಗೋದ್ರಾ ಗಲಭೆಯಲ್ಲಿ 23 ಮಂದಿ ಅಲ್ಪಸಂಖ್ಯಾತರನ್ನು ಜೀವಂತವಾಗಿ ದಹಿಸಲಾಗಿತ್ತು. 2002 ಮಾರ್ಚ್ 1ರಂದು ಆನಂದ್ ಜಿಲ್ಲೆಯ ಓಡೆ ಪಟ್ಟಣದ ಪಿರಾವಲಿ ಬಾಗೋಲ್ ಪ್ರದೇಶದಲ್ಲ ಸುಮಾರು 2000ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿದ್ದ ಪ್ರತಿಭಟನಾಕಾರರು ಅಲ್ಪಸಂಖ್ಯಾತರ ಮನೆಗಳಿಗೆ ಬೆಂಕಿ ಹಚ್ಚಿದ್ದರು. ಇದರಿಂದ ಮನೆಯಲ್ಲಿದ್ದ ಮಹಿಳೆಯರು, ಮಕ್ಕಳು ಹಾಗೂ ಪುರಷರು ಸೇರಿದಂತೆ 23 ಮಂದಿ ಸಜೀವ ದಹನವಾಗಿದ್ದರು. ಇದರಲ್ಲಿ ಮೋದಿ ಕೈವಾಡವಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement