ಬಿಸಿಯೂಟ ಪ್ರಕರಣ: ಅಧಿಕಾರಿಗಳ ನಿರ್ಲಕ್ಷ್ಯ
ನವದೆಹಲಿ: ಬಿಹಾರದಲ್ಲಿ ವಿಷಪೂರಿತ ಆಹಾರ ಸೇವಿಸಿ 23 ಮಕ್ಕಳು ಮೃತಪಟ್ಟಿರುವುದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಮೂಲಗಳು ತಿಳಿಸಿವೆ.
ಮಕ್ಕಳಿಗೆ ಬಿಸಿಯೂಟ ನೀಡುವ ಮುನ್ನ ಆಹಾರ ತಪಾಸಣೆ ಮಾಡಬೇಕು. ಆದರೆ ಇದಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಆಹಾರವನ್ನು ಪರೀಕ್ಷಿಸದೆ ನಿರ್ಲಕ್ಷ್ಯ ತೋರಿದ್ದಾರೆ ಎಂದು ತಿಳಿದು ಬಂದಿದೆ.
ಅಧಿಕಾರಿಗಳು ಪದಾರ್ಥಗಳ ಶೇಖರಣೆ ಮತ್ತು ಆಹಾರ ತಯಾರಿಕೆಯಲ್ಲಿ ಗಮನ ಹರಿಸಬೇಕು. ಆದರೆ ಇದರೆ ಕಡೆ ಅಧಿಕಾರಿಗಳು ಹೆಚ್ಚು ಗಮನ ಹರಿಸದ ಕಾರಣ ದುರಂತ ಸಂಭವಿಸಿದೆ ಎನ್ನಲಾಗಿದೆ.
ಛಪ್ರಾ ಜಿಲ್ಲೆಯ ಧರ್ಮಸ್ತಿ ಗಂಡಮಾನ್ನ ಪ್ರಾಥಮಿಕ ಶಾಲೆಯಲ್ಲಿನ ಬಿಸಿಯೂಟ ದುರಂತಕ್ಕೆ ಅಡುಗೆ ಎಣ್ಣೆಯಲ್ಲಿ ಕೀಟನಾಶಖ ಇದ್ದದ್ದು ಎಂದು ವಿಧಿವಿಜ್ಞಾನ ಪ್ರಯೋಗ ಶಾಲೆ ವರದಿಯಿಂದ ತಿಳಿದು ಬಂದಿದೆ.