ಮತ್ತೆ ಗಡಿ ದಾಟಿದ ಚೀನಾ ಸೈನಿಕರು: ವರದಿ
ನವದೆಹಲಿ: ಗಡಿಯಲ್ಲಿ ಮತ್ತೆ ಚೀನಾ ಕ್ಯಾತೆ ತೆಗೆದಿದೆ. ಗಡಿ ಉಲ್ಲಂಘನೆ ಮಾಡಿದ ಚೀನಾದ ಸೈನಿಕರು ಭಾರತದೊಳಗೆ ಅತಿಕ್ರಮಣ ಮಾಡಿದ್ದಾರೆ.
ಭಾರತದ ಗಡಿ ಪ್ರದೇಶವಾದ ಲಡಾಖ್ನ ಪೂರ್ವ ಭಾಗದಲ್ಲಿ ಅತಿಕ್ರಮ ಪ್ರವೇಶ ಮಾಡಿದ ಚೀನಾ ಸೈನಿಕರು, 'ಭಾರತದ ವಶದಲ್ಲಿರುವ ಗಡಿ ಪ್ರದೇಶವನ್ನು ಬಿಟ್ಟು ತೊಲಗಿ ಎಂಬ ಬ್ಯಾನರಗಳನ್ನು ಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ.
50 ಸೈನಿಕರು ಕುದುರೆಗಳೊಂದಿಗೆಜುಲೈ 16ರಂದುಸಂಜೆಯಿಂದ ಜುಲೈ 17ರ ಬೆಳ್ಳಿಗ್ಗೆ ವರೆಗೆಚುಮಾರ್ ಪ್ರದೇಶವನ್ನುಅತಿಕ್ರಮಣ ಮಾಡಿ ಸುತ್ತುವರೆಯಲು ಯತ್ನಿಸಿದ್ದಾರೆ ಎಂದು ವರದಿ ತಿಳಿಸಿದೆ.
ಮೇಲಿಂದ ಮೇಲೆ ಚೀನಾ ಭಾರತದೊಳಗೆ ಅತ್ರಿಕ್ರಮಣ ಮಾಡುತ್ತಿದ್ದು, ಭಾರತವನ್ನು ಕೆಣಕುತ್ತಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಕಳೆದ ಏಪ್ರಿಲ್ನಲ್ಲೂ ಚೀನಾ ಸೈನಿಕರು ಇಲ್ಲಿಗೆ ಅತಿಕ್ರಮಣ ಮಾಡಿದ್ದರು. ಮತ್ತೆ ಜೂ. 17ರಂದು ಗಡಿ ಉಲ್ಲಂಘನೆ ಮಾಡಿತ್ತು. ಇದರ ಬೆನ್ನಲ್ಲೆ ಕಳೆದ ವಾರ ಚೀನಾ ಸೈನಿಕರು ಅತ್ರಿಕಮಣ ಮಾಡಿದ್ದಾರೆ ಎಂದು ವರದಿಯಿಂದ ತಿಳಿದು ಬಂದಿದೆ.