ಚೀನಾದಲ್ಲಿ ಭೂಕಂಪ: 54 ಸಾವು
ಚೀನಾದ ಗನ್ಸು ವಲಯದಲ್ಲಿ ಭೂಕಂಪನವಾದ ಪರಿಣಾಮ 54 ಜನರು ಮೃತಪಟ್ಟಿದ್ದು, 21,000 ಕಟ್ಟಡಗಳು ಹಾನಿಗೀಡಾಗಿರುವ ಘಟನೆ...
ಬಿಜಿಂಗ್: ಚೀನಾದ ಗನ್ಸು ವಲಯದಲ್ಲಿ ಭೂಕಂಪನವಾದ ಪರಿಣಾಮ 54 ಜನರು ಮೃತಪಟ್ಟಿದ್ದು, 21,000 ಕಟ್ಟಡಗಳು ಹಾನಿಗೀಡಾಗಿರುವ ಘಟನೆ ಸೋಮವಾರ ಸಂಭವಿಸಿದೆ.
ಬೆಳಿಗ್ಗೆ 7.45ರ ಸಮಯದಲ್ಲಿ 6.6 ತೀವ್ರತೆಯಲ್ಲಿ ಭೂಕಂಪ ಸಂಭವಿಸಿದೆ. ಘಟನೆಯಲ್ಲಿ 50 ಜನರು ಸಾವನ್ನಪ್ಪಿದ್ದು, 300ಕ್ಕೂ ಹೆಚ್ಚು ಜನರು ಗಾಯಗೊಡಿದ್ದಾರೆ ಎಂದು ಚೀನಾದ ಅಧಿಕಾರಿಗಳು ತಿಳಿಸಿದ್ದಾರೆ.
ಭೂಕಂಪನದಿಂದಾಗಿ 1,200 ಮನೆಗಳು ನೆಲಸಮಗೊಂಡಿದ್ದು, 21,000 ಕಟ್ಟಡಗಳು ಹಾನಿಗೀಡಾಗಿವೆ. ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿದ್ದು, ಸಂತ್ರಸ್ತರ ರಕ್ಷಣೆ ಕಾರ್ಯ ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಇದಕ್ಕಿಂತ ಮೊದಲು ಚೀನಾದಲ್ಲಿ ಭಾರಿ ಪ್ರಮಾಣದ ಭೂಕಂಪನ ಸಂಭವಿಸಿರುವುದು ದಾಖಲೆಯಾಗಿದೆ. 1654 ಜುಲೈ 21ರಲ್ಲಿ 8.0 ತೀವ್ರತೆಯಲ್ಲಿ ಭೂಕಂಪ ಸಂಭವಿಸಿತ್ತು ಎಂದು ಭೂಕಂಪ ಕಾರ್ಯಾಲಯ ತಿಳಿಸಿದೆ.