ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಭಯೋತ್ಪಾದನೆ ಬೆಳೆಯಲು ಅಡ್ವಾಣಿಯ ಆಯೋಧ್ಯಾ ಯಾತ್ರಾ ಕಾರಣ: ದಿಗ್ವಿಜಯ್ ಸಿಂಗ್

Mainashree
Updated On : 23 Jul 2013, 4:02 am

ನವದೆಹಲಿ: ಭಾರತೀಯ ಜನತಾ ಪಕ್ಷದ ನಾಯಕ ಎಲ್.ಕೆ ಅಡ್ವಾಣಿಯವರ ಆಯೋಧ್ಯಾ ಯಾತ್ರೆಯ ನಂತರ ದೇಶದಲ್ಲಿ ಭಯೋತ್ಪಾದನೆ ಹೆಚ್ಚಾಗಿದೆ ಎಂದು ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಮಂಗಳವಾರ ಹೇಳಿದ್ದಾರೆ.

ಇಂಡಿಯನ್ ಮುಜಾಹಿದ್ದೀನ್ ಉಗ್ರ ಸಂಘಟನೆ ಹುಟ್ಟಿಕೊಂಡಿದ್ದು ಗುಜರಾತ್ ಗಲಭೆಯಿಂದಲೇ ಎಂದು ಕಾಂಗ್ರೆಸ್ ಮುಖಂಡ ಶಕೀಲ್ ಅಹಮದ್ ವಿವಾದಾತ್ಮಕ ಹೇಳಿಕೆ ನೀಡಿದ ಬೆನ್ನಲ್ಲೆ ಕಾಂಗ್ರೆಸ್‌ನ ಮತ್ತೊಬ್ಬ ಮುಖಂಡರಾದ ದಿಗ್ವಿಜಯ್ ಸಿಂಗ್ ಅವರು, ಬಿಜೆಪಿ ನಾಯಕ ಅಡ್ವಾಣಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ದೇಶದಲ್ಲಿ ಭಯೋತ್ಪಾದನೆ ತಲೆ ಎತ್ತಲು ಮೂಲ ಕಾರಣ 1980ರಲ್ಲಿ ಅಡ್ವಾಣಿಯವರು ಕೈಗೊಂಡಿದ್ದ ಆಯೋಧ್ಯಾ ಯಾತ್ರಾ ಎಂದು ದಿಗ್ವಿಜಯ್ ಸಿಂಗ್ ಆರೋಪಿಸಿದ್ದಾರೆ.

ಭಯೋತ್ಪಾದನೆಯನ್ನು ಹತ್ತಿಕ್ಕಲು ಕೇವಲ ಒಂದು ಸಮುದಾಯ ಮಾತ್ರ ಪ್ರಯತ್ನಿಸುತ್ತಿದೆ ಎಂದು ಹೇಳುತ್ತಿರುವ ಬಿಜೆಪಿ ಬಾಯಿ ಚಪಲ ತೀರಿಸಿಕೊಳ್ಳುತ್ತಿದೆ ಎಂದ ಸಿಂಗ್, ಇತ್ತೀಚೆಗೆ ನಡೆಯುತ್ತಿರುವ ಘಟನೆಗಳನ್ನಾ ನೋಡಿಯೇ ಅರಿಯಬಹುದು ಭಯೋತ್ಪಾದನೆ ನಿಗ್ರಹ ಒಂದು ಸಮುದಾಯಕ್ಕೆ ಮಾತ್ರ ಸೀಮಿತವಲ್ಲ ಎಂದಿದ್ದಾರೆ.

ಭಯೋತ್ಪಾದನೆಗೆ ತಾರ್ಕಿಕಾಧಾರ ಮತ್ತು ಸಮರ್ಥನೆ ಇಲ್ಲ ಎಂದು ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.
ಕೆಲವು ದಿನಗಳ ಹಿಂದೆಯಷ್ಟೇ ಅಹಮದ್ ಶಕೀಲ್ ಅವರು, ಆರ್‌ಎಸ್‌ಎಸ್ ಮತ್ತು ಬಿಜೆಪಿ ದೇಶದಲ್ಲಿ ಕೋಮು ಸಾಮರಸ್ಯ ಕದಡದಿರಲಿ, ಇನ್ನಾದರೂ ಬುದ್ಧಿಕಲಿತುಕೊಳ್ಳಲಿ. ಐಎಂ ಹುಟ್ಟಿಕೊಂಡದ್ದೇ 2002ರ ಗುಜರಾತ್ ಗಲಭೆ ಬಳಿಕ. ಹೀಗಂತ ರಾಷ್ಟ್ರೀಯ ತನಿಖಾ ಸಂಸ್ಥೆ ದೆಹಲಿ ಕೋರ್ಟ್ ಸ್ಫೋಟದ ಆರೋಪ ಪಟ್ಟಿಯಲ್ಲಿ ಹೇಳಿದೆ ಎಂದು ತಿಳಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement