ಮೋದಿಗೆ ವೀಸಾ ನಿರಾಕರಿಸುವಂತೆ ಸಂಸದರಿಂದ ಒಬಾಮಾಗೆ ಪತ್ರ
ನರೇಂದ್ರ ಮೋದಿ ಅವರಿಗೆ ವೀಸಾ ನೀಡುವಂತೆ ಬಿಜೆಪಿ ಅಧ್ಯಕ್ಷ ರಾಜ್ನಾಥ್ ಸಿಂಗ್ ಒತ್ತಾಯಿಸುತ್ತಿದ್ದರೆ, ಇತ್ತ ಮೋದಿಗೆ ವೀಸಾ ನೀಡಬೇಡಿ...
ವಾಷಿಂಗ್ಟನ್: ನರೇಂದ್ರ ಮೋದಿ ಅವರಿಗೆ ವೀಸಾ ನೀಡುವಂತೆ ಬಿಜೆಪಿ ಅಧ್ಯಕ್ಷ ರಾಜ್ನಾಥ್ ಸಿಂಗ್ ಒತ್ತಾಯಿಸುತ್ತಿದ್ದರೆ, ಇತ್ತ ಮೋದಿಗೆ ವೀಸಾ ನೀಡಬೇಡಿ ಎಂದು 65 ಮಂದಿ ಸಂಸದರು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರಿಗೆ ಪತ್ರ ಬರೆದಿದ್ದಾರೆ.
ಮೋದಿ ಅವರಿಗೆ ವೀಸಾ ನಿರಾಕರಿಸಿರುವ ಅಮೆರಿಕದ ಪ್ರಸ್ತುತ ನೀತಿಯಲ್ಲಿ ಯಾವುದೇ ರೀತಿಯ ಬದಲಾವಣೆ ಮಾಡುವುದು ಬೇಡ ಎಂದು 12 ಪಕ್ಷಗಳ ಸಂಸದರು ಒಬಾಮ ಅವರಿಗೆ ಪತ್ರ ಬರೆದಿದ್ದಾರೆ.
ನವೆಂಬರ್ 26, 2012 ರಂದು ಒಬಾಮ ಅವರಿಗೆ ಬರೆದ ಪತ್ರದಲ್ಲಿ 25 ರಾಜ್ಯ ಸಭಾ ಸದಸ್ಯರು ಸಹಿ ಹಾಕಿದ್ದು, ಡಿಸೆಂಬರ್ 2, 2012ರಂದು ಬರೆದ ಪತ್ರದಲ್ಲಿ 40 ಲೋಕಸಭಾ ಸದಸ್ಯರ ಸಹಿ ಇದೆ.
ರಾಜ್ನಾಥ್ ಸಿಂಗ್ ವಾಷಿಂಗ್ಟನ್ಗೆ ಹೋಗಿ ಅಲ್ಲಿನ ಪ್ರತಿನಿಧಿಗಳನ್ನು ಭೇಟಿ ಮಾಡುವ ಮುನ್ನ ಈ ಪತ್ರಗಳು ಅಮೆರಿಕಕ್ಕೆ ತಲುಪಿವೆ. ಈ ಪತ್ರದ ಪ್ರತಿಗಳನ್ನು ಇಂಡಿಯನ್ ಅಮೆರಿಕನ್ ಮುಸ್ಲಿಂ ಕೌನ್ಸಿಲ್ಗೆ ಕಳುಹಿಸಲಾಗಿದ್ದು, ಪತ್ರ ಬರೆಯಲು ರಾಜ್ಯಸಭೆಯ ಸ್ವತಂತ್ರ ಸಂಸದ ಮೊಹಮ್ಮದ್ ಅದೀಬ್ ಮುಂದಾಳತ್ವ ವಹಿಸಿದ್ದರು.