ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಕೇದಾರನಾಥದಲ್ಲಿ ಹೆಲಿಕಾಪ್ಟರ್ ಪತನ; 2 ಸಾವು

ಕೇದಾರನಾಥದ ಗರೂರ್‌ಚಟ್ಟಿ ಎಂಬಲ್ಲಿ ಬುಧವಾರ ಖಾಸಗಿ ಹೆಲಿಕಾಪ್ಟರ್ ಪತನಗೊಂಡಿರುವ ಬಗ್ಗೆ ವರದಿಯಾಗಿದೆ...

Rashmi Kasaragodu
Updated On : 24 Jul 2013, 7:41 am

ಡೆಹ್ರಾಡೂನ್: ಕೇದಾರನಾಥದ ಗರೂರ್‌ಚಟ್ಟಿ ಎಂಬಲ್ಲಿ ಬುಧವಾರ ಖಾಸಗಿ ಹೆಲಿಕಾಪ್ಟರ್ ಪತನಗೊಂಡಿರುವ ಬಗ್ಗೆ ವರದಿಯಾಗಿದೆ.

ಪ್ರಾಥಮಿಕ ವರದಿಗಳ ಪ್ರಕಾರ, ಈ ದುರ್ಘಟನೆಯಲ್ಲಿ ಹೆಲಿಕಾಪ್ಟರ್‌ನ ಪೈಲೆಟ್ ಮತ್ತು ಅವರ ಜತೆಗಿದ್ದ ತಂತ್ರಜ್ಞರೊಬ್ಬರು ಸಾವಿಗೀಡಾಗಿದ್ದಾರೆ .

ಅಪಘಾತಕ್ಕೀಡಾಗಿರುವ ಹೆಲಿಕಾಪ್ಟರ್ ಖಾಸಗಿ ಕಂಪನಿಯೊಂದಕ್ಕೆ ಸೇರಿದ್ದಾಗಿದೆ.

ಈ ಹೆಲಿಕಾಪ್ಟರ್ ಗರೂರ್‌ಚಟ್ಟಿ ಎಂಬಲ್ಲಿಂದ ಟೇಕಾಫ್ ಆಗುವ ಹೊತ್ತಿಗೆ ಅಪಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement