ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಮಂಗಳೂರು, ಉಡುಪಿಯಲ್ಲಿ ಕಡಲ್ಕೊರೆತ

ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕಳೆದ ವರ್ಷಕ್ಕಿಂತ ಈ ವರ್ಷ ಭಾರೀ ಮಳೆಯಾಗಿದ್ದು, ಮಂಗಳೂರು, ಉಡುಪಿ ಕರಾವಳಿಯಲ್ಲಿ ಕಡಲ್ಕೊರೆತ...

Rashmi Kasaragodu
Updated On : 24 Jul 2013, 7:34 am

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕಳೆದ ವರ್ಷಕ್ಕಿಂತ ಈ ವರ್ಷ ಭಾರೀ ಮಳೆಯಾಗಿದ್ದು, ಮಂಗಳೂರು, ಉಡುಪಿ ಕರಾವಳಿಯಲ್ಲಿ ಕಡಲ್ಕೊರೆತ ತೀವ್ರಗೊಳ್ಳುತ್ತಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ, ಮೊಗವೀರಪಟ್ಟಣ, ಕೋಟೆಪುರ, ಸೋಮೇಶ್ವರ, ಪಡುಬಿದ್ರಿಯಲ್ಲಿ ತೆಂಕ ಎರ್ಮಾಳ್, ಮಲ್ಪೆ, ಕುಂದಾಪುರ, ಬೆಂಗ್ರೆ, ಮಧ್ವನಗರ್  ಹಾಗು ಉಡುಪಿ ಜಿಲ್ಲೆಯ ತೆಂಕ ಗ್ರಾಮದಲ್ಲಿ ಕಡಲ್ಕೊರೆತ ಜಾಸ್ತಿಯಾಗ ತೊಡಗಿದೆ.

ಈ ಬಾರಿ ಕಡಲ್ಕೊರೆತ ಜಾಸ್ತಿಯಾಗಿದೆ. ಕಳೆದ ಬಾರಿ ಕಡಲ ಅಲೆಗಳು ಶಾರದ ಕಟ್ಟೆಯ ವರೆಗೆ ಬಂದಿತ್ತು. ಈಗ ಕಟ್ಟೆಯೇ ಮುಳುಗಿ ಹೋಗಿದೆ ಎಂದು ಲೈಫ್‌ಗಾರ್ಡ್ ಮೋಹನ್ ಕುಮಾರ್ ಹೇಳಿದ್ದಾರೆ.

ಕಳೆದ ರಾತ್ರಿ ಭಾರೀ ಗಾಳಿ ಬೀಸಿದ್ದು, ತೆಂಕ ಎರ್ಮಾಳ್‌ನಲ್ಲಿ ತೀವ್ರ ಕಡಲ್ಕೊರೆತವುಂಟಾಗಿದೆ. ಇಲ್ಲಿನ ಅಮೀನ್ ಮೂಲಸ್ಥಾನದ ಬಳಿಯಿರುವ 6 ಮನೆಗಳು ಕಡಲ್ಕೊರೆತ ಭೀತಿಗೊಳಗಾಗಿವೆ.

ತೊಟ್ಟಂ ಪ್ರದೇಶದಲ್ಲಿ ಗಂಗಾಧರ ಸುವರ್ಣ ಎಂಬವರ 20 ತೆಂಗಿನ ಮರ ನೀರುಪಾಲಾಗಿದೆ.

ಬುಧವಾರವೂ ಇಲ್ಲಿ ಮಳೆ ಜೋರಾಗಿದ್ದು, ಮಲ್ಪೆಯಲ್ಲಿಯೂ ಕಡಲ್ಕೊರೆತ ಮುಂದುವರಿದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement