ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಮಹಾಮಳೆಗೆ ಮುಂಬೈ ತತ್ತರ

ಮುಂಬೈಯಲ್ಲಿ ಕಳೆದ 24 ಗಂಟೆಗಳಿಂದ ಭಾರೀ ಮಳೆ ಸುರಿಯುತ್ತಿದ್ದು, ಮಹಾಮಳೆಗೆ ಮುಂಬೈ ನಗರ ತತ್ತರಿಸಿದೆ. ಇನ್ನು ಕೆಲವು ...

Rashmi Kasaragodu
Updated On : 24 Jul 2013, 3:54 am

ಮುಂಬೈ:  ಮುಂಬೈಯಲ್ಲಿ ಕಳೆದ 24 ಗಂಟೆಗಳಿಂದ ಭಾರೀ ಮಳೆ ಸುರಿಯುತ್ತಿದ್ದು, ಮಹಾಮಳೆಗೆ ಮುಂಬೈ ನಗರ ತತ್ತರಿಸಿದೆ. ಇನ್ನು ಕೆಲವು ದಿನಗಳ ವರೆಗೆ ಹೀಗೆಯೇ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಇತ್ತೀಚಿನ ವರದಿಗಳ ಪ್ರಕಾರ, ಭಾರೀ ಮಳೆಯಿಂದಾಗಿ ರೈಲು ಸಂಚಾರ ವಿಳಂಬವಾಗಿದೆ. ವೆಸ್ಟರ್ನ್ ಎಕ್ಸ್‌ಪ್ರೆಸ್‌ವೇ -ಜೆವಿಎಲ್‌ಆರ್ ಪ್ಲೈ ಓವರ್- ಅಂಧೇರಿ ಪ್ಲೈ ಓವರ್ ಮತ್ತು ವರ್ಲಿಯಲ್ಲಿ ರಸ್ತೆಗಳಲ್ಲಿ ನೀರು ನಿಂತು ಸಂಚಾರ ಸ್ಥಗಿತಗೊಂಡಿದೆ.

ಅದೇ ವೇಳೆ ಮುಂಬೈಯಲ್ಲಿ ನೆರೆ ಬರುವ ಸಾಧ್ಯತೆಯಿದೆ ಎಂಬ ಎಸ್ಸೆಮ್ಮೆಸ್ಸ್ ಹರಿದಾಡುತ್ತಿದ್ದು, ಇಂಥಾ ಗಾಳಿಸುದ್ದಿಗೆ ಜನರು ಗಮನ ಹರಿಸಬೇಡಿ ಎಂದು ಹವಾಮಾನ ಇಲಾಖೆ ಹೇಳಿದೆ.

ಥಾನೆಯಲ್ಲಿಯೂ ಮಳೆಯಿಂದಾಗಿ ಸಂಚಾರ ಸ್ಥಗಿತಗೊಂಡಿದ್ದು, ವಾಹನ ಸಂಚಾರಕ್ಕೆ ನಿಷೇಧ ಹೇರಲಾಗಿದೆ.

ಮಳೆಯಿಂದಾಗಿ ಮುಂಬೈ ನಗರವೇ ನೀರಿನಿಂದಾವೃತವಾಗಿದ್ದು, ಜನರು ಅಗತ್ಯವಿದ್ದರೆ ಮಾತ್ರ ರಸ್ತೆಗಿಳಿದರೆ ಸಾಕು ಎಂದು ಮುಂಬೈ ಪೊಲೀಸರು ಹೇಳಿದ್ದಾರೆ.

ತುರ್ತು ಸಹಾಯಕ್ಕಾಗಿ
ಬಿಎಂಸಿ ವಿಪತ್ತು ನಿರ್ವಹಣಾ ಕೇಂದ್ರ -108
ದೂರುಗಳು- 1916

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement