ಮೆಟ್ರೋದಲ್ಲಿ ಮಹಿಳೆಯನ್ನು ಚುಡಾಯಿಸಿದ ವಿದ್ಯಾರ್ಥಿಗಳ ಬಂಧನ
ಕೊಲ್ಕತಾ: ಚಲಿಸುತ್ತಿದ್ದ ಮೆಟ್ರೋದಲ್ಲಿ ಮಹಿಳೆಯನ್ನು ಚುಡಾಯಿಸಿದ ಇಬ್ಬರು ಕಾಲೇಜು ವಿದ್ಯಾರ್ಥಿಗಳನ್ನು ರೈಲ್ವೆ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಕೇಂದ್ರ ಮೆಟ್ರೋ ರೈಲ್ವೆ ನಿಲ್ದಾಣದಿಂದ ದಮ್ದಮ್ ನಿಲ್ದಾಣದಕ್ಕೆ ಹೊರಟಿದ್ದ ಮೆಟ್ರೋ ರೈಲಿನಲ್ಲಿ ಇಬ್ಬರು ಕಾಲೇಜು ವಿದ್ಯಾರ್ಥಿಗಳು ಮಹಿಳೆಯನ್ನು ಅಶ್ಲೀಲ ಪದಗಳಿಂದ ಚುಡಾಯಿಸಿದ್ದಾರೆ.
ಮಹಿಳೆ ತನ್ನ ಅತ್ತೆಯ ಜೊತೆ ಪ್ರಯಾಣಿಸುತ್ತಿದ್ದರು. ಈ ಸಂದರ್ಭದಲ್ಲಿ ಕಾಲೇಜು ವಿದ್ಯಾರ್ಥಿಗಳು ಆಕೆಯನ್ನು ಮುಂದಿನ ನಿಲ್ದಾಣ ಬರುವವರೆಗೂ ಅಶ್ಲೀಲ ಪದ ಬಳಸಿ ಚುಡಾಸಿದ್ದಾರೆ. ಮಹಿಳೆಯ ಮಾವ ರೈಲ್ವೆ ಅಧಿಕಾರಿಯಾಗಿದ್ದು ಈ ಸಂಬಂಧ ಅವರಿಗೆ ಮಾಹಿತಿ ನೀಡಲಾಗಿತ್ತು. ತಕ್ಷಣ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ ಅವರು, ವಿದ್ಯಾರ್ಥಿಗಳನ್ನು ರೈಲ್ವೆ ಪೊಲೀಸರಿಗೆ ಒಪ್ಪಿಸಿದ್ದಾರೆ.