ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಆರೆಸ್ಸೆಸ್ಸ್ ಬಾಂಬ್ ತಯಾರಿಗೆ ತರಬೇತಿ ನೀಡುತ್ತಿದೆ: ದಿಗ್ವಿಜಯ್ ಸಿಂಗ್

ಪದೇ ಪದೇ ಆರೆಸ್ಸೆಸ್ಸ್ ಮೇಲೆ ಆರೋಪ ಹೊರಿಸುವ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಗುರುವಾರ ಆರೆಸ್ಸೆಸ್ಸ್ ಬಾಂಬ್ ...

Rashmi Kasaragodu
Updated On : 25 Jul 2013, 7:05 am

ನೀಮುಚ್: ಪದೇ ಪದೇ ಆರೆಸ್ಸೆಸ್ಸ್ ಮೇಲೆ ಆರೋಪ ಹೊರಿಸುವ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಗುರುವಾರ ಆರೆಸ್ಸೆಸ್ಸ್ ಬಾಂಬ್ ತಯಾರಿಸಲು ತರಬೇತಿ ನೀಡುತ್ತಿದೆ ಎಂದು ಆರೋಪಿಸಿದ್ದಾರೆ.

ರಾಜ್ಯದಲ್ಲಿ ಈ ಹಿಂದೆ ನಡೆದ ಘಟನೆಗಳನ್ನು ಆಧರಿಸಿ ನಾನು ಈ ಮಾತನ್ನು ಹೇಳುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.

1992ರಲ್ಲಿ ಬಿಜೆಪಿ ಮಧ್ಯಪ್ರದೇಶದಲ್ಲಿ ಅಧಿಕಾರದಲ್ಲಿರುವಾಗ ಆರೆಸ್ಸೆಸ್ಸ್‌ನ ಕಚೇರಿ ಸೇವಾ ಭಾರತಿಯಲ್ಲಿ ಬಾಂಬ್ ಸ್ಫೋಟಗೊಂಡು ಒಬ್ಬ ವ್ಯಕ್ತಿ ಸಾವಿಗೀಡಾಗಿದ್ದರು.

1993ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೇರಿದಾಗ ಆ ಪ್ರಕರಣವನ್ನು ಮತ್ತೆ ತೆರೆಯಲಾಯಿತು. ಇದರಲ್ಲಿ ಬಿಜೆಪಿಯವರು ಖಾರ್‌ಗಾಂವ್‌ನಲ್ಲಿ ನಡೆಸುತ್ತಿದ್ದ ಶಾಲೆಯ ಪ್ರಿನ್ಸಿಪಾಲ್ ಬಂಧಿತರಾದರು.

ಅದೇ ವೇಳೆ 2004ರಲ್ಲಿ ಮಾಹೋನಲ್ಲಿ ಬಾಂಬ್ ಸ್ಫೋಟದ ರುವಾರಿಗಳನ್ನು ಬಂಧಿಸಿದಾಗ, ತಮಗೆ ಬಾಂಬ್ ತಯಾರಿಸಲು ಆರೆಸ್ಸೆಸ್ಸ್ ತರಬೇತಿ ನೀಡಿತ್ತು ಎಂದು ಅವರು ಹೇಳಿದ್ದರು.

ಈ ಎಲ್ಲ ಘಟನೆಗಳ ಆಧಾರದ ಮೇಲೆಯೇ ನಾನು ಈ ಮಾತನ್ನು ಹೇಳಿದ್ದೇನೆ. ಆದಾಗ್ಯೂ, ಬಿಜೆಪಿ ಯಾವಾಗಲೂ ಮೂಲಭೂತವಾದಿ ಸಂಘಟನೆಗಳಿಗೆ ಬೆಂಬಲ ನೀಡುತ್ತಲೇ ಬಂದಿದೆ ಎಂದು ದಿಗ್ವಿಜಯ್ ನುಡಿದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement