ದೆಹಲಿ ಗ್ಯಾಂಗ್ ರೇಪ್: ಆ.5ಕ್ಕೆ ತೀರ್ಪು ಮುಂದೂಡಿಕೆ
ಇಂದು ಪ್ರಕಟವಾಗಬೇಕಿದ್ದ ದೆಹಲಿ ಸಾಮೂಹಿಕ ಅತ್ಯಾಚಾರ ಪ್ರಕರಣದ ಮೊದಲ ತೀರ್ಪು ಮತ್ತೆ..
ನವದೆಹಲಿ: ಇಂದು ಪ್ರಕಟವಾಗಬೇಕಿದ್ದ ದೆಹಲಿ ಸಾಮೂಹಿಕ ಅತ್ಯಾಚಾರ ಪ್ರಕರಣದ ಮೊದಲ ತೀರ್ಪು ಮತ್ತೆ ಮುಂದೂಡಿಕೆಯಾಗಿದ್ದು, ಆಗಸ್ಟ್ 5ರಂದು ತೀರ್ಪು ಪ್ರಕಟಿಸುವುದಾಗಿ ಬಾಲಾಪರಾಧ ನ್ಯಾಯಾಲಯ ಗುರುವಾರ ಹೇಳಿದೆ.
ದೆಹಲಿ ಗ್ಯಾಂಗ್ ರೇಪ್ ಪ್ರಕರಣದ ಆರೋಪಿತ ಅಪ್ರಾಪ್ತ ವಯಸ್ಸಿನ ಬಾಲಕನಿಗೆ ಸಂಬಂಧಿಸಿದ ತೀರ್ಪನ್ನು ಬಾಲ ನ್ಯಾಯ ಮಂಡಳಿ ಇಂದು ಪ್ರಕಟಿಸಬೇಕಿತ್ತು. ಈ ಮುಂಚೆ ಜುಲೈ 11ಕ್ಕೆ ಪ್ರಕಟವಾಗಬೇಕಿದ್ದ ತೀರ್ಪುನ್ನು ನ್ಯಾಯಮಂಡಳಿ ಜುಲೈ 25ಕ್ಕೆ ನಿಗದಿಪಡಿಸಿತ್ತು. ಆದರೆ ಇಂದು ಸಹ ತೀರ್ಪು ಪ್ರಕಟಿಸಿದ ಕೋರ್ಟ್, ತೀರ್ಪನ್ನು ಮತ್ತೆ ಆಗಸ್ಟ್ 5ಕ್ಕೆ ಮುಂದೂಡಿದೆ.
ಕಳೆದ ಡಿ.16ರಂದು 23 ವರ್ಷದ ಪ್ಯಾರಾಮೆಡಿಕಲ್ ವಿದ್ಯಾರ್ಥಿನಿ ಮೇಲೆ ಚಲಿಸುತ್ತಿದ್ದ ಬಸ್ಸಿನಲ್ಲೇ ಅತ್ಯಾಚಾರ ಎಸಗಲಾಗಿತ್ತು. ಈ ವೇಳೆ ತೀವ್ರ ಹಲ್ಲೆಗೊಳಗಾಗಿದ್ದ ವಿದ್ಯಾರ್ಥಿನಿ ಡಿ. 29ರಂದು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಳು. ಪ್ರಕರಣಕ್ಕೆ ಸಂಬಂಧಿಸಿ ಅಪ್ರಾಪ್ತ ವಯಸ್ಕ ಸೇರಿ ಒಟ್ಟು ಆರು ಮಂದಿಯನ್ನು ಬಂಧಿಸಲಾಗಿತ್ತು. ಇದರಲ್ಲಿ ಪ್ರಮುಖ ಆರೋಪಿ ರಾಮ್‌ಸಿಂಗ್ ಜೈಲಿನೊಳಗೆ ಅನುಮಾನಾಸ್ಪದವಾಗಿ ಮೃತಪಟ್ಟಿದ್ದ.