ಬಾತ್ಲಾ ಹೌಸ್ ಎನ್‌ಕೌಂಟರ್: ಶೆಹಜಾದ್ ದೋಷಿ
ದೆಹಲಿ ಪೊಲೀಸ್ ಇನ್ಸ್‌ಪೆಕ್ಟರ್ ಮೋಹನ್ ಚಂದ್ ಶರ್ಮಾ ಹತ್ಯೆಗೆ ಕಾರಣವಾದ ಬಾತ್ಲಾ ಹೌಸ್ ಎನ್‌ಕೌಂಟರ್ ಪ್ರಕರಣದಲ್ಲಿ...
ನವದೆಹಲಿ: ದೆಹಲಿ ಪೊಲೀಸ್ ಇನ್ಸ್‌ಪೆಕ್ಟರ್ ಮೋಹನ್ ಚಂದ್ ಶರ್ಮಾ ಹತ್ಯೆಗೆ ಕಾರಣವಾದ ಬಾತ್ಲಾ ಹೌಸ್ ಎನ್‌ಕೌಂಟರ್ ಪ್ರಕರಣದಲ್ಲಿ ಶೆಹಜಾದ್ ಅಹ್ಮದ್ ಅವರನ್ನು ದೋಷಿ ಎಂದು ಸೆಷನ್ ಕೋರ್ಟ್ ತೀರ್ಪು ನೀಡಿದೆ.
ಕಳೆದ 5 ವರ್ಷಗಳಿಂದ ಈ ಪ್ರಕರಣ ನಡೆದು ಬರುತ್ತಿದ್ದು ಗುರುವಾರ ಪ್ರಸ್ತುತ ಪ್ರಕರಣದ ಏಕೈಕ ಆರೋಪಿ ಶಹಜಾದ್ ಅಹ್ಮದ್ ಅವರು ದೋಷಿ ಎಂದು ಕೋರ್ಟ್ ಹೇಳಿದೆ.
ಪೊಲೀಸ್ ಅಧಿಕಾರಿಯೊಬ್ಬರು ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾಗ ಅದಕ್ಕೆ ತಡೆಯೊಡ್ಡಿ, ಹತ್ಯೆಗೈದ ಆರೋಪದಲ್ಲಿ ಶೆಹಜಾದ್ ಅಹ್ಮದ್ ದೋಷಿ ಎಂದು ಅಡಿಷನಲ್ ಸೆಷನ್ ಜಡ್ಜ್ ರಾಜೇಂದ್ರ ಕುಮಾರ್ ಶಾಸ್ತ್ರಿ ಹೇಳಿದ್ದಾರೆ.
ಅಹ್ಮದ್ ಅವರು ದೋಷಿ ಎಂದು ಸಾಬೀತಾಗಿದ್ದು, ನ್ಯಾಯಾಲಯ ಜುಲೈ 29ರಂದು ಶಿಕ್ಷೆ ಪ್ರಕಟಿಸಲಿದೆ.
ಏತನ್ಮಧ್ಯೆ, ಸೆಷನ್ ಕೋರ್ಟ್ ತೀರ್ಪು ಪ್ರಶ್ನಿಸಿ ತಾವು ಹೈಕೋರ್ಟ್ ಮೆಟ್ಟಲೇರಲಿದ್ದೇವೆ ಎಂದು ಅಹ್ಮದ್ ಅವರ ವಕೀಲರು ಹೇಳಿದ್ದಾರೆ.
ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ಸದಸ್ಯನಾದ ಶೆಹಜಾದ್ ಅಹ್ಮದ್, 2008 ಸೆಪ್ಟಂಬರ್ 19ರಂದು ಪೊಲೀಸರ ಮೇಲೆ ಗುಂಡು ಹಾರಿಸಿ ಇನ್ಸೆಪೆಕ್ಟರ್ ಶರ್ಮಾ ಅವರನ್ನು ಹತ್ಯೆಗೈದಿದ್ದನು.