ಭಾರತೀಯರು ಕೋಪವನ್ನು ನಿಯಂತ್ರಿಸಿಕೊಳ್ಳಬೇಕು: ರಾಹುಲ್
ಅಮೇತಿ: ಭಾರತೀಯರು ಕೋಪವನ್ನು ನಿಯಂತ್ರಿಸಿಕೊಳ್ಳಬೇಕು ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಗುರುವಾರ ಹೇಳಿದ್ದಾರೆ.
ಭಾದರ್‌ನ ತ್ರಿಸುಂಡಿಯಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಭಾರತೀಯರಲ್ಲಿ ಕೋಪವನ್ನು ನಿಯಂತ್ರಿಸಬೇಕು. ಇಡೀ ದೇಶವೇ ಒಂದಾಗಿ ಯೋಚಿಸಿಬೇಕು ಎಂದು ತಿಳಿಸಿದ್ದಾರೆ.
ಭಾರತೀಯರು ಕೋಪವನ್ನು ತಡೆದುಕೊಂಡರೆ ಅನೇಕ ಅನಾಹುತಗಳನ್ನು ತಡೆಯಬಹುದು. ಉದಾಹರಣೆಗೆ ಸಿಆರ್‌ಪಿಎಫ್ ಯೋಧನೊಬ್ಬ ತಮ್ಮ ಬಳಿ ಬಂದು, 1990ರಲ್ಲಿ ಮಾವೋವಾದಿಯಾಗಿದ್ದೆನು. ಆಗ ನಿಮ್ಮ ಕುಟಂಬವನ್ನು ಹತ್ಯೆ ಮಾಡಬೇಕು ಎಂದಿದ್ದೆ. ಆದರೆ ಕೋಪವನ್ನು ತಡೆ ಹಿಡಿದ ನಾನು ಈಗ ಬದಲಾಗಿದ್ದೇನೆ ಎಂದನು.
ಆತನ ಧೈರ್ಯ ಮತ್ತು ಆತನಲ್ಲಿದ್ದ ತಾಳ್ಮೆ ನೋಡಿದಾಗ ಅನ್ನಿಸಿತು, ದೇಶದಲ್ಲಿ ಪ್ರತಿಯೊಬ್ಬರು ಇದೇ ರೀತಿ ತಮ್ಮ ಕೋಪ ತಡೆ ಹಿಡಿದು ಕೊಂಡರೆ ಅನೇಕ ಅನಾಹುತಗಳನ್ನು ತಡೆಯಬಹುದು ಎಂದು ರಾಹುಲ್ ಅಭಿಪ್ರಾಯಪಟ್ಟಿದ್ದಾರೆ.
ಸಿಆಪ್‌ಪಿಎಫ್ ಯೋಧರೇ ದೇಶಕ್ಕಾಗಿ ದುಡಿಯುತ್ತಿದ್ದಾರೆ. ಅವರಿಂದ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ ಎಂದುರು.