ಸ್ಪೇನ್‌ನಲ್ಲಿ ಕತ್ರೀನಾ-ರಣಬೀರ್ 'ಹಾಟ್ ಸ್ಪಾಟ್'
ಬಾಲಿವುಡ್‌ನ ಪ್ರಣಯ ಪಕ್ಷಿಗಳಾದ ಕತ್ರೀನಾ ಕೈಫ್ ಹಾಗೂ ರಣಬೀರ್ ಕಪೂರ್ ..
ನವದೆಹಲಿ: ಬಾಲಿವುಡ್‌ನ ಪ್ರಣಯ ಪಕ್ಷಿಗಳಾದ ಕತ್ರೀನಾ ಕೈಫ್ ಹಾಗೂ ರಣಬೀರ್ ಕಪೂರ್ ಇಬ್ಬರೂ ಸ್ಪೇನ್‌ನ ಬೀಚ್‌ವೊಂದರಲ್ಲಿ 'ಹಾಟ್ ಸ್ಪಾಟ್' ಆಗಿದ್ದು ಈಗ ಬಿಟೌನ್‌ನಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಅಲ್ಲದೆ ಸ್ಪೇನ್‌ನಲ್ಲಿದ್ದ ಈ ಹಾಟ್ ಜೋಡಿ ಇದೀಗ ಶ್ರೀಲಂಕಾದಲ್ಲಿ ಕಾಣಿಸಿಕೊಂಡಿದೆ.
ಸ್ಪೇನ್ ಪ್ರವಾಸದಲ್ಲಿರುವ ಕ್ಯಾಟ್ ತನ್ನ ಬಾಯ್‌ಫ್ರೆಂಡ್ ರಣಬೀರ್ ಜತೆ ಬಿಕನಿಯಲ್ಲಿ ಕಾಣಿಸಿಕೊಳ್ಳುವ ಮೂಲಕ ಬಾಲಿವುಡ್‌ನಲ್ಲಿ ಹಲವು ದಿನಗಳಿಂದ ಹರಿದಾಡುತ್ತಿದ್ದ ಗಾಸಿಪ್‌ಗಳಿಗೆ ಫುಲ್ ಸ್ಟಾಪ್ ಹಾಕಿದ್ದಾರೆ.
ಸ್ಪೇನ್‌ನಲ್ಲಿ ಕ್ಯಾಟ್‌ನೊಂದಿಗೆ ಸಾಕಷ್ಟು ಸುತ್ತಾಡಿದ್ದ ರಣಬೀರ್ ಈಗ ತಮ್ಮ 'ಬಾಂಬೆ ವೆಲ್‌ವೆಟ್' ಚಿತ್ರದ ಚಿತ್ರೀಕರಣಕ್ಕಾಗಿ ಶ್ರೀಲಂಕಾಗೆ ತೆರಳಿದ್ದಾರೆ.
'ಬ್ಯಾಂಗ್ ಬ್ಯಾಂಗ್' ಚಿತ್ರದ ನಾಯಕ ಹೃತಿಕ್ ರೋಶನ್ ಅವರು ಚಿತ್ರೀಕರಣದ ವೇಳೆ ಅಪಘಾತ ಮಾಡಿಕೊಂಡು ಶಸ್ತ್ರ ಚಿಕಿತ್ಸೆಗೆ ಒಳಗಾಗಿರುವುದರಿಂದ ಸದ್ಯ ಚಿತ್ರದ ನಾಯಕಿ ಕತ್ರೀನಾಗೆ ಬಿಡುವು. ಈ ಅವಧಿಯನ್ನು ಸದ್ಬಳಕೆ ಮಾಡಿಕೊಂಡ ಕ್ಯಾಟ್ ರಣಬೀರ್‌ನೊಂದಿಗೆ ಲಂಕಾಗೆ ಹಾರಿದ್ದಾರೆ.