ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ರಾಜಕೀಯದಲ್ಲಿ ಮೂಗು ತೂರಿಸಬೇಡಿ: ಅಮರ್ಥ್ಯ ಸೇನ್‌ಗೆ ಉದ್ಧವ್ ಸಲಹೆ

ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಟೀಕಿಸಿದ್ದಕ್ಕಾಗಿ ನೊಬೆಲ್ ಪ್ರಶಸ್ತಿ ವಿಜೇತ ಅರ್ಥಶಾಸ್ತ್ರಜ್ಞ ಅಮರ್ಥ್ಯ ..

Lingaraj Badiger
Updated On : 26 Jul 2013, 3:43 am

ಮುಂಬೈ: ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಟೀಕಿಸಿದ್ದಕ್ಕಾಗಿ ನೊಬೆಲ್ ಪ್ರಶಸ್ತಿ ವಿಜೇತ ಅರ್ಥಶಾಸ್ತ್ರಜ್ಞ ಅಮರ್ಥ್ಯ ಸೇನ್ ಅವರಿಂದ ಭಾರತ ರತ್ನ ಪ್ರಶಸ್ತಿಯನ್ನು ಹಿಂಪಡೆಯಬೇಕು ಎಂಬ ಬಿಜೆಪಿ ಸಂಸದ ಚಂದನ್ ಮಿತ್ರ ಅವರ ಹೇಳಿಕೆಯನ್ನು ಶಿವಸೇನೆ ಒಪ್ಪಿಕೊಂಡಿಲ್ಲ. ಆದರೆ ರಾಜಕೀಯದಲ್ಲಿ ಮೂಗು ತೂರಿಸಬೇಡಿ ಎಂದು ಅರ್ಥಶಾಸ್ತ್ರಜ್ಞನಿಗೆ ಶುಕ್ರವಾರ ಸಲಹೆ ನೀಡಿದೆ.

ಅಮರ್ಥ್ಯ ಸೇನ್ ಅವರು ಅಂತರಾಷ್ಟ್ರೀಯ ಮಟ್ಟದ ಅರ್ಥಶಾಸ್ತ್ರಜ್ಞರು. ಅಂತಹ ವ್ಯಕ್ತಿಯಿಂದ ಭಾರತ ರತ್ನ ಹಿಂಪಡೆಯಬೇಕು ಎಂಬುದು ಸರಿಯಲ್ಲ ಎಂದು ಉದ್ಧವ್ ಠಾಕ್ರೆ ಅವರು ಸೇನಾ ಮುಖವಾಣಿ 'ಸಾಮ್ನಾದ' ಸಂಪಾದಕೀಯದಲ್ಲಿ ಹೇಳಿದ್ದಾರೆ.

ಅಮರ್ಥ್ಯ ಸೇನ್ ಒಬ್ಬ ಅರ್ಥಶಾಸ್ತ್ರಜ್ಞ ಆಗಿರಬಹುದು. ಆದರೆ ದೇಶದ ಬಡತನ ನಿರ್ಮೂಲನೆಗಾಗಿ ಅವರು ಏನು ಮಾಡಿದ್ದಾರೆ. ಸದ್ಯ ದೇಶದ ಆರ್ಥಿಕ ಸ್ಥಿತಿ ದುಸ್ಥರವಾಗಿದೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಬಡತನ ಹೆಚ್ಚುತ್ತಲೇ ಇದೆ. ಇದಕ್ಕೆಲ್ಲ ಮೋದಿ ಕಾರಣರಲ್ಲ ಮತ್ತು ಇದಕ್ಕೆ ಅಮರ್ಥ್ಯ ಸೇನ್ ಬಳಿ ಯಾವುದೇ ಔಷಧಿಯೂ ಇಲ್ಲ ಎಂದು ಠಾಕ್ರೆ ತಿಳಿಸಿದ್ದಾರೆ.

ಅಮರ್ಥ್ಯ ಸೇನ್ ಅವರು ರಾಜಕೀಯದಲ್ಲಿ ಮೂಗು ತೂರಿಸುವುದನ್ನು ಬಿಟ್ಟು ಮೊದಲು ತಮ್ಮ ಕೆಲಸವನ್ನು ತಾವು ಸರಿಯಾಗಿ ಮಾಡಲಿ ಎಂದು ಜನ ಕೇಳಿದರೆ, ಸೇನ್ ಏನಂತ ಉತ್ತರಿಸುತ್ತಾರೆ ಎಂದು ಉದ್ಧವ್ ಠಾಕ್ರೆ ಪ್ರಶ್ನಿಸಿದ್ದಾರೆ. ಅಲ್ಲದೆ ಅಮರ್ಥ್ಯ ಸೇನ್ ಅವರ ಹೆಗ್ಗಳಿಕೆಯನ್ನು ನಾವು ಮರೆಯಲು ಸಾಧ್ಯವಿಲ್ಲ. ಹಾಗೆಯೇ ಅವರಿಂದ ಭಾರತ ರತ್ನ ಪ್ರಶಸ್ತಿಯನ್ನು ಹಿಂಪಡೆಯಬೇಕು ಎಂಬುದು ಸರಿಯಲ್ಲ. ಎಲ್ಲರೂ ತಮ್ಮ ತಮ್ಮ ಇತಿ ಮಿತಿಗಳನ್ನು ಅರಿತು ಮಾತನಾಡಬೇಕು ಎಂದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement