ರಾಜಸ್ತಾನದಲ್ಲಿ 2 ತಲೆಯ ಅಪೂರ್ವ ಶಿಶು ಜನನ
ರಾಜಸ್ತಾನದ ಸಾದತ್ ಆಸ್ಪತ್ರೆಯಲ್ಲಿ ಜುಲೈ 24 ಕ್ಕೆ ಆರ್ಸಿ ಎಂಬಾಕೆ 2 ತಲೆಯಿರುವ ಗಂಡು ಶಿಶುವೊಂದಕ್ಕೆ ಜನ್ಮ ನೀಡಿದ್ದಾಳೆ...
ಜೈಪುರ್: ರಾಜಸ್ತಾನದ ಸಾದತ್ ಆಸ್ಪತ್ರೆಯಲ್ಲಿ ಜುಲೈ 24 ಕ್ಕೆ ಆರ್ಸಿ ಎಂಬಾಕೆ 2 ತಲೆಯಿರುವ ಗಂಡು ಶಿಶುವೊಂದಕ್ಕೆ ಜನ್ಮ ನೀಡಿದ್ದಾಳೆ.
ಮಗು ಜನಿಸಿದ ಕೂಡಲೇ, ಅಮ್ಮ ಮತ್ತು ಮಗುವನ್ನು ಜೈಪುರದ ಜೆಕೆ ಲಾನ್ ಆಸ್ಪತ್ರೆಗೆ ವರ್ಗಾಯಿಸಲಾಗಿದೆ.
ಮಗುವಿಗೆ ಎರಡು ತಲೆಗಳಿದ್ದು, ಎರಡು ಬೆನ್ನೆಲುವು, ಎರಡು ನರವ್ಯೂಹ, ಎರಡು ಕೈ, ಕಾಲು ಮತ್ತು ಒಂದೇ ಪೃಷ್ಠ ಮತ್ತು ಗುಪ್ತಾಂಗವಿದೆ ಎಂದು ಎಕ್ಸ್‌ರೇ ತೆಗೆದಾಗ ತಿಳಿದುಬಂದಿದೆ ಎಂದು ಲಾನ್ ಆಸ್ಪತ್ರೆಯ ಮೆಡಿಕಲ್ ಸುಪರಿಟೆಂಡೆಂಟ್ ಎಸ್.ಡಿ ಶರ್ಮಾ ಹೇಳಿದ್ದಾರೆ.
ವೈದ್ಯಕೀಯ ದಾಖಲೆಗಳ ಪ್ರಕಾರ, ಕಳೆದ 500 ವರ್ಷಗಳಲ್ಲಿ ಇಂಥಾ 600 ಪ್ರಕರಣಗಳು ವರದಿಯಾಗಿದ್ದವು.
ಇತ್ತೀಚೆಗೆ ಜಬಲ್‌ಪುರ್‌ನಲ್ಲಿ ಇಂಥದ್ದೇ ಮಗು ಜನಿಸಿದ್ದು, ಮಗು ಜನಿಸಿದ ಕೆಲವೇ ಹೊತ್ತಿನಲ್ಲಿ ಕೊನೆಯುಸಿರೆಳೆದಿತ್ತು.