'ರು.12ಕ್ಕೆ ಊಟ ಸಿಗುತ್ತೆ' ಹೇಳಿಕೆ ವಾಪಸ್ ಪಡೆದ ರಾಜ್ ಬಬ್ಬರ್
ಮುಂಬೈಯಲ್ಲಿ ರು.12ಕ್ಕೆ ಊಟ ಸಿಗುತ್ತೋ ಇಲ್ವೋ ಅಂತ ಗೊತ್ತಿಲ್ಲ ಆದರೆ ಗುರುವಾರ ರು.12ಕ್ಕೆ ಊಟ ಸಿಗುತ್ತೆ ಎಂದು ಹೇಳಿಕೆ...
ನವದೆಹಲಿ: ಮುಂಬೈಯಲ್ಲಿ ರು.12ಕ್ಕೆ ಊಟ ಸಿಗುತ್ತೋ ಇಲ್ವೋ ಅಂತ ಗೊತ್ತಿಲ್ಲ ಆದರೆ ಗುರುವಾರ ರು.12ಕ್ಕೆ ಊಟ ಸಿಗುತ್ತೆ ಎಂದು ಹೇಳಿಕೆ ನೀಡಿದ್ದ ಕಾಂಗ್ರೆಸ್ ನಾಯಕ ರಾಜ್ ಬಬ್ಬರ್ ಶುಕ್ರವಾರ ತಮ್ಮ ಹೇಳಿಕೆಯನ್ನು ವಾಪಸ್ ಪಡೆದಿದ್ದಾರೆ.
ರು. 12ಕ್ಕೆ ಊಟ ಸಿಗುತ್ತದೆ ಎಂಬ ಹೇಳಿಕೆ ನೀಡಿದ್ದ ರಾಜ್ಬಬ್ಬರ್ ಇಂದು ತಮ್ಮ ಹೇಳಿಕೆಗಾಗಿ ಕ್ಷಮೆಯಾಚಿಸಿದ್ದಾರೆ.
ತಮ್ಮ ಹೇಳಿಕೆಯನ್ನು ವಾಪಾಸ್ ಪಡೆದುಕೊಂಡ ಬಬ್ಬರ್, ತಾನು ಬಿಪಿಎಲ್ (ಬಡತನ ರೇಖೆಗಿಂತ ಕೆಳಗಿನವರು) ಕುಟುಂಬವನ್ನು ಉದ್ದೇಶಿಸಿ ಈ ಮಾತು ಹೇಳಿದ್ದೆ ಅಂದಿದ್ದಾರೆ.
ಅದೇ ವೇಳೆ ಕಾಂಗ್ರೆಸ್ ನಾಯಕರ ಈ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ವಕ್ತಾರ ಅಜಯ್ ಮಕೇನ್ ತಮ್ಮ ಪಕ್ಷದ ನಾಯಕರು ರು.5ಕ್ಕೆ ಅಥವಾ ರು.12ಕ್ಕೆ ಊಟ ಸಿಗುತ್ತೆ ಅಂತ ಹೇಳಿರುವುದು ಅವರ ವೈಯಕ್ತಿಕ ಅಭಿಪ್ರಾಯವಷ್ಟೇ, ಪಕ್ಷದಲ್ಲ ಎಂದು ಹೇಳಿದ್ದಾರೆ.