ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

2ಜಿ: ಟೀನಾ, ಅನಿಲ್ ಅಂಬಾನಿಗೆ ಸಮನ್ಸ್

2ಜಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಲಾಯನ್ಸ್ ಎಡಿಎಜಿ ಅಧ್ಯಕ್ಷ ಅನಿಲ್ ಅಂಬಾನಿ ಆಗಸ್ಟ್ 22ಕ್ಕೆ ನ್ಯಾಯಲಯಕ್ಕೆ...

Rashmi Kasaragodu
Updated On : 27 Jul 2013, 5:17 am

ನವದೆಹಲಿ: 2ಜಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಲಾಯನ್ಸ್ ಎಡಿಎಜಿ ಅಧ್ಯಕ್ಷ ಅನಿಲ್ ಅಂಬಾನಿ ಆಗಸ್ಟ್ 22ಕ್ಕೆ ನ್ಯಾಯಲಯಕ್ಕೆ ಹಾಜರಾಗುವಂತೆ ದೆಹಲಿ ಹೈಕೋರ್ಟ್ ಹೊಸ ಸಮನ್ಸ್  ಕಳುಹಿಸಿದೆ.

ಅದೇ ವೇಳೆ ಅಗಸ್ 23ಕ್ಕೆ ನ್ಯಾಯಾಲಯಕ್ಕೆ ಹಾಜರಾಗುವಂತೆ ಅನಿಲ್ ಅಂಬಾನಿ ಅವರ ಪತ್ನಿ ಟೀನಾ ಅಂಬಾನಿ ಅವರಿಗೂ ಕೋರ್ಟ್ ಸಮನ್ಸ್ ಕಳುಹಿಸಲಾಗಿದೆ.

ವಾರಗಳ ಹಿಂದೆಯಷ್ಟೇ 2 ಜಿ ಸ್ಪೆಕ್ಟ್ರಂ ಹಗರಣಕ್ಕೆ ಸಂಬಂಧಿಸಿದಂತೆ ಅನಿಲ್ ಹಾಗು ಟೀನಾ ಅವರನ್ನು ಪ್ರಾಸಿಕ್ಯೂಷನ್ ಪರ ಸಾಕ್ಷಿಯನ್ನಾಗಿಸಬೇಕು ಎಂಬ ಸಿಬಿಐ ಮನವಿಗೆ ನ್ಯಾಯಾಧೀಶ ಓ.ಪಿ. ಸೈನಿ ಒಪ್ಪಿಗೆ ಸೂಚಿಸಿದ್ದರು.

ಇದೀಗ ಅನಿಲ್ ಮತ್ತು ಟೀನಾ ಅವರನ್ನು 2ಜಿ ಹಗರಣದ ಸಾಕ್ಷಿಗಳಾಗಿ ಪರಿಗಣಿಸಲಾಗಿದೆ.

ಶುಕ್ರವಾರ ಅನಿಲ್ ಅವರು ನ್ಯಾಯಾಲಯಕ್ಕೆ ಹಾಜರಾಗಬೇಕಾಗಿತ್ತು. ಆದರೆ ಮುಂಚಿತವಾಗಿಯೇ ಒಪ್ಪಿಕೊಂಡ ಕಾರ್ಯಕ್ರಮಗಳು ಇರುವ ಕಾರಣ, ನ್ಯಾಯಾಲಯಕ್ಕೆ ಬರಲು ಸಾಧ್ಯಾವಾಗುವುಗದಿಲ್ಲ ಎಂದು ಅನಿಲ್, ಸ್ಪೆಷಲ್ ಸಿಬಿಐ ನ್ಯಾಯಧೀಶ ಸೈನಿ ಅವರಿಗೆ ಮನವಿ ಮಾಡಿದ್ದರು.

ಅನಿಲ್ ಅಂಬಾನಿ ಅವರ ಮನವಿಯನ್ನು ಪರಿಗಣಿಸಿದ ಕೋರ್ಟ್, ಇದೀಗ ಅಗಸ್ಟ್ 22 ಮುಂಚಿತವಾಗಿ ಕೋರ್ಟ್ಗೆ ಹಾಜರಾಗುವಂತೆ ಸೂಚಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement