ಕೇಂದ್ರ ಸಚಿವ ತಿವಾರಿ ಮೇಲೆ ಆಸಿಡ್ ದಾಳಿಗೆ ಯತ್ನ?
ತಮ್ಮ ಮೇಲೆ ಆಸಿಡ್ ದಾಳಿಗೆ ಯತ್ನಿಸಲಾಗಿದೆ ಎಂದು ಕೇಂದ್ರ ವಾರ್ತ ಮತ್ತು ಪ್ರಸಾರ ಖಾತೆ ಸಚಿವ..
ಚಂಡೀಗಢ: ತಮ್ಮ ಮೇಲೆ ಆಸಿಡ್ ದಾಳಿಗೆ ಯತ್ನಿಸಲಾಗಿದೆ ಎಂದು ಕೇಂದ್ರ ವಾರ್ತ ಮತ್ತು ಪ್ರಸಾರ ಖಾತೆ ಸಚಿವ ಮನೀಶ್ ತಿವಾರಿ ಅವರು ಶನಿವಾರ ಆರೋಪಿಸಿದ್ದಾರೆ.
ಶುಕ್ರವಾರ ರಾತ್ರಿ ತಿವಾರಿ ಅವರ ಚಂಡೀಗಢ ನಿವಾಸದ ಬಳಿ ನಾಲ್ಕು ಬಾಟಲ್ ಆಸಿಡ್ ಪತ್ತೆಯಾಗಿದ್ದು, ಅದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ನಿನ್ನೆ ಕೇಂದ್ರ ಸಚಿವರು ನೇರವಾಗಿ ತಮ್ಮ ಲೂಧಿಯಾನ ನಿವಾಸಕ್ಕೆ ತೆರಳಿದ್ದರಿಂದ ದಾಳಿಯಿಂದ ತಪ್ಪಿಸಿಕೊಂಡಿದ್ದಾರೆ ಎನ್ನಲಾಗಿದೆ. ಸಚಿವರ ನಿವಾಸದ ಹೊರಗೆ ಆಸಿಡ್ ಬಾಟಲ್ ಪತ್ತೆಯಾದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.