ತೆಲಂಗಾಣ ರಾಜ್ಯ ರಚನೆ ವಿರೋಧಿಸಿ ಸೀಮಾಂಧ್ರದಲ್ಲಿ ಪ್ರತಿಭಟನೆ
ಆಂಧ್ರಪ್ರದೇಶ ವಿಭಜನೆ ಮಾಡಿ, ಪ್ರತ್ಯೇಕ ತೆಲಂಗಾಣ ರಾಜ್ಯ ರಚೆನೆ ಮಾಡುವುದನ್ನು ವಿರೋಧಿಸಿ ರಾಯಲ್‌ಸೀಮೆ ಮತ್ತು...
ಹೈದ್ರಾಬಾದ್: ಆಂಧ್ರಪ್ರದೇಶ ವಿಭಜನೆ ಮಾಡಿ, ಪ್ರತ್ಯೇಕ ತೆಲಂಗಾಣ ರಾಜ್ಯ ರಚೆನೆ ಮಾಡುವುದನ್ನು ವಿರೋಧಿಸಿ ರಾಯಲ್‌ಸೀಮೆ ಮತ್ತು ಆಂಧ್ರಪ್ರದೇಶದ ಕೆಲವು ಕಡೆ ಪ್ರತಿಭಟನೆಗಳು ನಡೆಯುತ್ತಿವೆ.
ವಿದ್ಯಾರ್ಥಿಗಳು, ರಾಜಕೀಯ ಮತ್ತು ರಾಜಕೀಯೇತರ ಸಂಘಟನೆಗಳ ಕಾರ್ಯಕರ್ತರು ಹಲವಾರು ಪ್ರದೇಶಗಳಲ್ಲಿ ರ್ಯಾಲಿಗಳನ್ನು ನಡೆಸಿದ್ದಾರೆ. ಸೀಮಾಂಧ್ರದ ಕೆಲವೊಂದು ಪ್ರದೇಶಗಳಲ್ಲಿ ಬಂದ್‌ಗೆ ಕರೆ ನೀಡಲಾಗಿದೆ.
ಕೆಲವೊಂದು ನಗರಗಳಲ್ಲಿ ಸಮೈಕ್ಯ ಆಂಧ್ರ ಅಥವಾ ಸಂಯುಕ್ತ ಆಂಧ್ರ ವಿದ್ಯಾರ್ಥಿಗಳ ಜಂಟಿ ಕಾರ್ಯ ಸಮಿತಿ ಶಿಕ್ಷಣ ಸಂಸ್ಥೆಗಳ ಬಂದ್‌ಗೆ ಕರೆ ನೀಡಿದೆ.
ಕಾಂಗ್ರೆಸ್ ಕೋರ್ ಕಮಿಟಿ ಪ್ರತ್ಯೇಕ ತೆಲಂಗಾಣ ರಚನೆಗೆ ಗ್ರೀನ್ ಸಿಗ್ನಲ್ ನೀಡಲು ಸಿದ್ಧವಾಗಿದ್ದು, ಆಂಧ್ರದ ಕರಾವಳಿ ಮತ್ತು ರಾಯಲ್‌ಸೀಮೆಯಲ್ಲಿ ಭಾರೀ ಪ್ರತಿಭಟನೆಗಳು ಆರಂಭವಾಗಿವೆ.