ಐಪಿಎಲ್ ಸ್ಪಾಟ್ ಫಿಕ್ಸಿಂಗ್: ಕುಂದ್ರಾ, ಮೇಯಪ್ಪನ್ಗೆ ಕ್ಲೀನ್ಚಿಟ್
ಐಪಿಎಸ್ ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಸಿಕ್ಕಿಹಾಕಿಕೊಂಡಿದ್ದ ರಾಜಸ್ತಾನ್ ರಾಯಲ್ಸ್ ತಂಡದ ಸಹ ಮಾಲೀಕ ರಾಜ್ಕುಂದ್ರಾ ಅವರಿಗೆ ಬಿಸಿಸಿಐ ಭಾನುವಾರ ಕ್ಲೀನ್ಚಿಟ್ ...
ಕೊಲ್ಕತ್ತಾ: ಐಪಿಎಸ್ ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಸಿಕ್ಕಿಹಾಕಿಕೊಂಡಿದ್ದ ರಾಜಸ್ತಾನ್ ರಾಯಲ್ಸ್ ತಂಡದ ಸಹ ಮಾಲೀಕ ರಾಜ್ಕುಂದ್ರಾ ಅವರಿಗೆ ಬಿಸಿಸಿಐ ಭಾನುವಾರ ಕ್ಲೀನ್ಚಿಟ್ ನೀಡಿದೆ.
ಅದೇ ವೇಳೆ ಬೆಟ್ಟಿಂಗ್ನಲ್ಲಿ ಆರೋಪಿಯಾಗಿದ್ದ ಬಿಸಿಸಿಐ ಅಧ್ಯಕ್ಷ ಎನ್.ಶ್ರೀನಿವಾಸನ್ರ ಅಳಿಯ ಗುರುನಾಥ್ ಮೇಯಪ್ಪನ್ಗೂ ಕ್ಲೀನ್ಚಿಟ್ ನೀಡಲಾಗಿದೆ. ಏತನ್ಮಧ್ಯೆ, ಮೇಯಪ್ಪನ್ ಮೇಲಿನ ಆರೋಪದ ಬಗ್ಗೆ ಎರಡು ಸದಸ್ಯರ ತಂಡ ತನಿಖೆ ನಡೆಸಿದ್ದು, ಅದರಲ್ಲಿ ಮೇಯಪ್ಪನ್ ಬೆಟ್ಟಿಂಗ್ ನಡೆಸಿರುವುದರ ಬಗ್ಗೆ ಸಾಕ್ಷ್ಯಾಧಾರಗಳು ಲಭಿಸಿವೆ.
ಇದೀಗ ಮೇಯಪ್ಪನ್ಗೆ ಕ್ಲೀನ್ಚಿಟ್ ಲಭಿಸಿರುವ ಕಾರಣ ಬಿಸಿಸಿಐ ಅಧ್ಯಕ್ಷ ಎನ್.ಶ್ರೀನಿವಾಸನ್ ಮತ್ತೊಮ್ಮೆ ಅಧಿಕಾರಕ್ಕೇರುವ ಎಲ್ಲ ಸಾಧ್ಯತೆಗಳು ಕಂಡು ಬರುತ್ತಿಲೆ.
ರಾಜ್ಕುಂದ್ರಾ, ರಾಜಸ್ತಾನ್ ರಾಯಲ್ಸ್ ಮತ್ತು ಇಂಡಿಯಾ ಸಿಮೆಂಟ್ಸ್ ಯಾವುದರ ವಿರುದ್ಧವೂ ಯಾವುದೇ ಸಾಕ್ಷ್ಯಾಧಾರಗಳು ಸಿಗದೇ ಇರುವ ಕಾರಣ ಕುಂದ್ರಾಗೆ ಕ್ಲೀನ್ಚಿಟ್ ನೀಡಲಾಗಿದೆ ಎಂದು ಬಿಸಿಸಿಐ ಉಪಾಧ್ಯಕ್ಷ ನಿರಂಜನ್ ಷಾ ಹೇಳಿದ್ದಾರೆ.
ಬಿಸಿಸಿಐ ನಿರ್ಧಾರವನ್ನು ಇದೀಗ ಐಪಿಎಸ್ ಗವರ್ನಿಂಗ್ ಕೌನ್ಸಿಲ್ಗೆ ಕಳುಹಿಸಿದ್ದು, ಈ ಬಗ್ಗೆ ಆಗಸ್ಟ್ 2ರಂದು ಅಂತಿಮ ನಿರ್ಧಾರ ಹೊರಬೀಳಲಿದೆ.
ಮೇಯಪ್ಪನ್ಗೆ ಕ್ಲೀನ್ಚಿಟ್ ಲಭಿಸಿರುವ ಕಾರಣ ಬಿಸಿಸಿಐ ಮುಖ್ಯಸ್ಥ ಶ್ರೀನಿವಾಸನ್ ಸೆಪ್ಟಂಬರ್ನಲ್ಲಿ ನಡೆಯಲಿರುವ ಮರು ಚುನಾವಣೆಯಲ್ಲಿ ಸ್ಪರ್ಧಿಸಲು ತಯಾರಿ ನಡೆಸಿದ್ದಾರೆ ಎಂಬ ಸುದ್ದಿಯೂ ಕೇಳಿಬರುತ್ತಿದೆ.