ತೆಲಂಗಾಣ ವಿಚಾರ: ಜುಲೈ 31ಕ್ಕೆ ಯುಪಿಎ ಸಭೆ
ಆಂಧ್ರಪ್ರದೇಶವನ್ನು ವಿಭಜನೆ ಮಾಡಿ ತೆಲಂಗಾಣ ರಾಜ್ಯ ರಚನೆ ಮಾಡುವ ಬಗ್ಗೆ ಯುಪಿಎ ಸರ್ಕಾರ ಜುಲೈ 31ಕ್ಕೆ ಸಭೆ ನಡೆಸಿದ...
ನವದೆಹಲಿ: ಆಂಧ್ರಪ್ರದೇಶವನ್ನು ವಿಭಜನೆ ಮಾಡಿ ತೆಲಂಗಾಣ ರಾಜ್ಯ ರಚನೆ ಮಾಡುವ ಬಗ್ಗೆ ಯುಪಿಎ ಸರ್ಕಾರ ಜುಲೈ 31ಕ್ಕೆ ಸಭೆ ನಡೆಸಿದ ನಂತರ ತೀರ್ಮಾನ ಕೈಗೊಳ್ಳಲಿದೆ. ಆದಾಗ್ಯೂ, ವಿರೋಧದ ನಡುವೆಯೂ ಯುಪಿಎ ತೆಲಂಗಾಣ ರಚನೆಗೆ ಮುಂದಾಗಿರುವುದನ್ನು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಕಿರಣ್ ಕುಮಾರ್ ರೆಡ್ಡಿ, ಇದು ಸರ್ಕಾರದ ಪ್ರಾಣಾಹುತಿ ಹೆಜ್ಜೆ ಎಂದು ಬಣ್ಣಿಸಿದ್ದಾರೆ.
ವರದಿಗಳ ಪ್ರಕಾರ, ಕಾಂಗ್ರೆಸ್ ನೇತೃತ್ವವು ಪ್ರತ್ಯೇಕ ತೆಲಂಗಾಣ ರಾಜ್ಯ ರಚಿಸಲು ಮುಂದಾಗಿದೆ. ತೆಲಂಗಾಣ ರಚನೆಯಾದರೆ ರಾಯಲ್ಸೀಮೆಯ ಎರಡು ಜಿಲ್ಲೆಗಳು ತೆಲಂಗಾಣಕ್ಕೆ ಸೇರಲಿವೆ.
ತೆಲಂಗಾಣ ರಚನೆಯ ಬಗ್ಗೆ ಚರ್ಚಿಸುವುದಕ್ಕಾಗಿಯೇ ಯುಪಿಎ ಜುಲೈ 31ಕ್ಕೆ ಸಭೆ ಕರೆದಿದೆ. ಪ್ರಸ್ತುತ ಸಭೆಯಲ್ಲಿ ತನ್ನ ಎಲ್ಲ ಮಿತ್ರ ಪಕ್ಷಗಳ ಜತೆ ಯುಪಿಎ ಚರ್ಚೆ ನಡೆಸಲಿದೆ .
ಆಂಧ್ರಪ್ರದೇಶ ವಿಭಜನೆಗೆ ಆಂಧ್ರ ಸಿಎಂ ಕಿರಣ್ ರೆಡ್ಡಿ ವಿರೋಧ ಸೂಚಿಸಿದ್ದು, ತನ್ನ ಪಕ್ಷ ತೆಲಂಗಾಣ ರಚನೆಗೆ ಸಮ್ಮತಿ ನೀಡುವುದಿಲ್ಲ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ಗೆ ಹೇಳಿದ್ದಾರೆ.
ತೆಲಂಗಾಣ ರಾಜ್ಯ ರಚನೆಯ ಬಗ್ಗೆ ಯುಪಿಎ ಮುಂದಿನ ವಾರವೇ ಅಂತಿಮ ನಿರ್ಧಾರ ಕೈಗೊಳ್ಳಲಿದೆ.