ನಿತೀಶ್ರ ಹುಟ್ಟೂರು ನಲಂದಾದಿಂದ ಮೋದಿ ಸ್ಪರ್ಧಿಸಲಿ: ಬಿಹಾರ ಬಿಜೆಪಿ
ಗುಜರಾತ್ ಮುಖ್ಯಮಂತ್ರಿ ಲೋಕಸಭಾ ಚುನಾವಣೆಗೆ ಗುಜರಾತ್ನಿಂದ ಹೊರಗೆ ಸ್ಪರ್ಧಿಸುವುದಾದರೆ ಅವರು ಬಿಹಾರ ಸಿಎಂ...
ಪಾಟ್ನಾ: ಗುಜರಾತ್ ಮುಖ್ಯಮಂತ್ರಿ ಲೋಕಸಭಾ ಚುನಾವಣೆಗೆ ಗುಜರಾತ್ನಿಂದ ಹೊರಗೆ ಸ್ಪರ್ಧಿಸುವುದಾದರೆ ಅವರು ಬಿಹಾರ ಸಿಎಂ ನಿತೀಶ್ ಕುಮಾರ್ ಅವರ ಹುಟ್ಟೂರು ನಲಂದಾದಿಂದ ಸ್ಪರ್ಧಿಸಲಿ ಎಂದು ಬಿಜೆಪಿಯ ನಾಯಕರೊಬ್ಬರು ಹೇಳಿದ್ದಾರೆ.
ನಾನು ಈ ಸಲಹೆಯನ್ನು ನರೇಂದ್ರ ಮೋದಿಯವರಿಗೆ ನೀಡಿದ್ದೇನೆ. ಅವರು ಬಿಹಾರದಲ್ಲಿರುವ ಬಿಜೆಪಿ ಕಾರ್ಯಕರ್ತರಿಗೆ ಈ ಮೂಲಕ ಉತ್ತಮ ಸಂದೇಶವನ್ನು ನೀಡುವಂತಾಗಲಿ ಎಂದು ಬಿಜೆಪಿ ದೇಶೀಯ ಉಪಾಧ್ಯಕ್ಷ ಸಿಪಿ ಠಾಕೂರ್ ಹೇಳಿದ್ದಾರೆ.
ಮೋದಿ ನಲಂದಾದಿಂದ ಸ್ಪರ್ಧಿಸುವುದಾದರೆ ಲಕ್ನೋ, ವಾರಣಾಸಿ ನಂತರ ಗುಜರಾತ್ ಮುಖ್ಯಮಂತ್ರಿ ಎಲ್ಲಿ ಸ್ಪರ್ಧಿಸಿದರೂ ಅಲ್ಲಿ ಗೆಲ್ಲುತ್ತಾರೆ ಎಂದು ಈ ಮೂಲಕ ಸಾಬೀತು ಪಡಿಸಿದಂತಾಗುತ್ತದೆ.
ಬಿಜೆಪಿಯ ಮಾಜಿ ರಾಜ್ಯ ಅಧ್ಯಕ್ಷರಾಗಿದ್ದ ಠಾಕೂರ್ ಮೋದಿ, ಗುಜರಾತ್ನಲ್ಲಿ ಜನಪ್ರಿಯತೆ ಗಳಿಸಿರುವುದಕ್ಕಿಂತ ಬಿಹಾರದಲ್ಲಿ ಹೆಚ್ಚು ಜನಪ್ರಿಯರಾಗಿದ್ದಾರೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.