ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಬೈಕ್ ಸ್ಟಂಟ್: ಪೊಲೀಸ್‌ರಿಂದ ಗುಂಡು ಹಾರಾಟ; ಓರ್ವ ಸಾವು

ಭಾನುವಾರ ಮುಂಜಾನೆ 2.15ರ ಹೊತ್ತಿಗೆ ಸಂಸತ್ ಮಾರ್ಗದಲ್ಲಿ ಸ್ಟಂಟ್ ಮಾಡುತ್ತಿದ್ದ ಬೈಕ್ ಸವಾರರ ಮೇಲೆ ದೆಹಲಿ ಪೊಲೀಸರು ಗುಂಡು...

Rashmi Kasaragodu
Updated On : 28 Jul 2013, 3:25 am

ನವದೆಹಲಿ: ಭಾನುವಾರ ಮುಂಜಾನೆ 2.15ರ ಹೊತ್ತಿಗೆ ಸಂಸತ್ ಮಾರ್ಗದಲ್ಲಿ ಸ್ಟಂಟ್ ಮಾಡುತ್ತಿದ್ದ ಬೈಕ್ ಸವಾರರ ಮೇಲೆ ದೆಹಲಿ ಪೊಲೀಸರು ಗುಂಡು ಹಾರಿಸಿದ್ದಾರೆ. ಈ ಗುಂಡು ಹಾರಾಟದಲ್ಲಿ ಓರ್ವ ಸಾವಿಗೀಡಾಗಿದ್ದು, ಇನ್ನೊಬ್ಬನಿಗೆ ಗಾಯಗಳಾಗಿವೆ.

ಸಂಸತ್ ರಸ್ತೆಯಲ್ಲಿ  ಯುವಕರ ಗುಂಪೊಂದು ಅಪಾಯಕಾರಿ ಸ್ಟಂಟ್ ಮಾಡುತ್ತಿದ್ದರು. ಅದನ್ನು ನಿಲ್ಲಿಸುವಂತೆ ಪೊಲೀಸರು ಸೂಚಿಸಿದಾಗಲೂ ಯುವಕರು ಅದನ್ನು ನಿಲ್ಲಿಸಲಿಲ್ಲ. ಆದ್ದರಿಂದ ಪೊಲೀಸರು ಗುಂಡು ಹಾರಾಟ ಮಾಡಿದ್ದಾರೆ.

ಬೈಕ್‌ನ ಟಯರ್ ಪಂಕ್ಚರ್ ಮಾಡುವುದಕ್ಕಾಗಿ ಪೊಲೀಸರು ಗುಂಡು ಹಾರಾಟ ಮಾಡಿದ್ದರೂ, ಅದು ಬೈಕ್ ನಲ್ಲಿದ್ದ ಯುವಕನಿಗೆ ತಾಗಿದೆ. ಸಾವಿಗೀಡಾದವನು ಮಾಲ್ವಿಯಾ ನಗರದ ಕರಣ್ ಪಾಂಡೆ ಎಂದು ಗುರುತಿಸಲಾಗಿದೆ.

ಪುನೀತ್ ಶರ್ಮಾ ಎಂಬಾತನ ಬೈಕ್‌ನಲ್ಲಿದ್ದ ಪಾಂಡೆಗೆ ಗುಂಡೇಟು ತಗುಲಿದ್ದು, ಪುನೀತ್‌ಗೆ ಗಾಯಗಳಾಗಿವೆ. ಇವರಿಬ್ಬರನ್ನೂ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ತಕ್ಷಣ ದಾಖಲಿಸಿದ್ದರೂ, ಪಾಂಡೆ ಆ ಹೊತ್ತಿಗೆ  ಸಾವಿಗೀಡಾಗಿದ್ದನು.

ಪೊಲೀಸರ ಪ್ರಕಾರ ಸುಮಾರು 30 ಯುವಕರ ತಂಡವೊಂದು ಬೈಕ್‌ನಲ್ಲಿ ಸ್ಟಂಟ್ ಮಾಡುತ್ತಿದ್ದಾಗ ಪೊಲೀಸರು ಬಂದು ಸ್ಟಂಟ್ ನಿಲ್ಲಿಸುವಂತೆ ಹೇಳಿದ್ದಾರೆ. ಇದನ್ನು ಲೆಕ್ಕಿಸದೆ, ಯುವಕರು ಪೊಲೀಸ್ ವ್ಯಾನ್‌ಗೆ ಕಲ್ಲೆಸಿದು, ವಾಹನವನ್ನು ಹಾನಿಗೆಡವಿದ್ದಾರೆ. ಆವಾಗ ಬೈಕ್ ಪಂಕ್ಟರ್ ಮಾಡಿಸುವ ಸಲುವಾಗಿ ಪೊಲೀಸ್ ಗುಂಡು ಹಾರಿಸಿದ್ದು, ಅದು ಗುರಿತಪ್ಪಿ ಬೈಕ್‌ನಲ್ಲಿದ್ದ ಯುವಕನಿಗೆ ತಾಗಿದೆ.

ಈ ಘಟನೆಯಲ್ಲಿ ಕೆಲವು ಪೊಲೀಸರಿಗೂ ಗಾಯಗಳಾಗಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement