ಇಟಲಿಯಲ್ಲಿ ಕಣಿವೆಗೆ ಉರುಳಿದ ಬಸ್: 38 ಸಾವು
ರೋಮ್: ಪರ್ವತಮಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಬಸ್ ಕಣಿವೆಗೆ ಉರುಳಿದ ಪರಿಣಾಮ 38 ಪ್ರಯಾಣಿಕರು ಮೃತಪಟ್ಟಿರುವ ಘಟನೆ ಸೋಮವಾರ ಇಟಲಿಯಲ್ಲಿ ಸಂಭವಸಿದೆ.
ಇಟಲಿಯ ದಕ್ಷಿಣ ಭಾಗದಲ್ಲಿರುವ ಕಂಪಾನಿಯಾ ವಲಯದಲ್ಲಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಬೆಳಿಗ್ಗೆ ಈ ಅಪಘಾತವಾಗಿದೆ.
ಪರ್ವತಗಳು ಹೆಚ್ಚಾಗಿರುವ ಹೆದ್ದಾರಿಯಲ್ಲಿ ಒಂದೇ ಸಮನೇ ವಾಹನಗಳು ಒಡಾಟದಿಂದ ಹೆದ್ದಾರಿ ಕುಸಿದು ಕಣಿವೆಗೆ ಬಸ್ ಉರುಳಿದೆ. ಬಸ್‌ನಲ್ಲಿ ಸಂಚರಿಸುತ್ತಿದ್ದ 38 ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟಿದ್ದು, 10ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಜನರ ರಕ್ಷಣಾ ಕಾರ್ಯಚರಣೆ ಮಾಡಲಾಗಿದ್ದು, ಘಟನೆ ಬಗ್ಗೆ ತನಿಖೆಗೆ ಆದೇಶಿಸಲಾಗುವುದು. ಘಟನೆಯಲ್ಲಿ ಮೃತಪಟ್ಟ ಚಾಲಕನ ತಪ್ಪೋ ಅಥವಾ ರಸ್ತೆ ಕಾಮಗಾರಿಯ ತಪ್ಪೋ ಅಥವಾ ಬಸ್‌ನಲ್ಲಿ ತಾಂತ್ರಿಕ ದೋಷವಿತ್ತೋ ಎಂಬುದರ ಬಗ್ಗೆ ತನಿಖೆ ನಡೆಸುವಂತೆ ಸೂಚಿಸಲಾಗುವುದು ಎಂದು ಸ್ಥಳಿಯ ಅಧಿಕಾರಿಗಳು ತಿಳಿಸಿದ್ದಾರೆ.