ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಇರಾಖ್‌ನಲ್ಲಿ ಬಾಂಬ್ ಸ್ಫೋಟ: 55 ಸಾವು

Mainashree
Updated On : 29 Jul 2013, 5:02 am

ಬಘ್ದಾದ್: 17 ಕಾರ್ ಬಾಂಬ್ ಸ್ಫೋಟಗೊಂಡ ಪರಿಣಾಮ 55 ಜನರು ಮೃತಪಟ್ಟಿರುವ ಘಟನೆ ಸೋಮವಾರ ಇರಾಖ್‌ನ ವಿವಿಧ ಪ್ರದೇಶದಲ್ಲಿ ಸಂಭವಿಸಿದೆ.

ಶಿಟ್ಟೆ ಮುಸ್ಲಿಂ ಜನಾಂಗವಿರುವ ಪ್ರದೇಶದಲ್ಲಿ ಕಾರ್ ಬಾಂಬ್ ಸ್ಫೋಟಗೊಂಡು 55 ಜನರು ಸ್ಥಳದ್ದಲ್ಲೇ ಮೃತಪಟ್ಟಿದ್ದಾರೆ. ಸನ್ನಿ ಮುಸ್ಲಿಂ ಜನಾಂಗ ಮತ್ತು ಅಲ್‌ಖೈದಾ ಸಂಘಟನೆಯವರು ಈ ದಾಳಿ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಶಿಟ್ಟೆ ಮತ್ತು ಸನ್ನಿ ಮುಸ್ಲಿಂ ಜನಾಂಗದ ನಡುವೆ ಹಿಂಸಾಚಾರ ಹೆಚ್ಚಾಗಿದೆ. ಎರಡು ಗುಂಪಿನ ಗಲಭೆಯಲ್ಲಿ ಈ ವರ್ಷ 4000 ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಇರಾಖ್‌ನಲ್ಲಿ ಶಿಟ್ಟೆ ಜನಾಂಗ ಹೆಚ್ಚಾಗಿದ್ದು, ಸನ್ನಿ ಮುಸ್ಲಿಂ ಜನಾಂಗ ಅಲ್ಲಸಂಖ್ಯಾತರು. ಅಧಿಕಾರದ ದಾಹ ಈ ಎರಡು ಜನಾಂಗದ ಗಲಭೆಗೆ ಕಾರಣವಾಗಿದೆ.

ಜನರು ಹೆಚ್ಚಿರುವಂತಹ ಬೀದಿಗಳಲ್ಲಿ ಮತ್ತು ಮಾರುಕಟ್ಟೆಯಲ್ಲಿ ಬಾಂಬ್ ಸ್ಫೋಟಿಸಲಾಗಿದೆ. ರಾಜಧಾನಿಯಿಂದ 150 ಕಿ.ಮೀ ದೂರದಲ್ಲಿರುವ ಸಿಟಿ ಬಸ್‌ನಿಲ್ದಾಣದಲ್ಲಿ ಎರಡು ಕಾರ್ ಬಾಂಬ್ ಸ್ಫೋಟಿಸಿದ್ದು, 10 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮಹಮೌದಿಯಾ, ಬಘ್ದಾದ್ ದಕ್ಷಣ ಭಾಗದಲ್ಲಿ, ಸಮವ ಪ್ರದೇಶ, ಸಾಡರ್ ನಗರ, ಹಬಿಬಿಯಾ, ಹುರಿಯಾ, ಬಯ್ಯಾ ಸೇರಿದಂತೆ ಇತರೆ ಪ್ರದೇಶದಲ್ಲಿ 17 ಕಾರ್ ಬಾಂಬ್ ಸ್ಫೋಟಿಸಿಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement