ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಬಾಟ್ಲಾ ಹೌಸ್ ಎನ್‌ಕೌಂಟರ್: ನಾಳೆ ಶಿಕ್ಷೆ ಪ್ರಕಟ

Mainashree
Updated On : 29 Jul 2013, 6:10 am

ನವದೆಹಲಿ: ಐದು ವರ್ಷಗಳ ಹಿಂದಿನ ಬಾಟ್ಲಾ ಹೌಸ್ ಎನ್‌ಕೌಂಟರ್ ಪ್ರಕರಣದ ಅಪರಾಧಿ ಇಂಡಿಯನ್ ಮುಜಾಹಿದೀನ್ ಕಾರ್ಯಕರ್ತ ಶಹಜಾದ್ ಅಹಮದ್‌ನ ಶಿಕ್ಷೆಯ ಪ್ರಮಾಣವನ್ನು ನಾಳೆ ಪ್ರಕಟಿಸುವ ಸಾಧ್ಯತೆ ಇದೆ.

ಪೊಲೀಸ್ ಇನ್ಸೆಪೆಕ್ಟರ್ ಎಂ.ಸಿ ಶರ್ಮಾ ಹತ್ಯೆ ಪ್ರಕರಣದಲ್ಲಿ ದೋಷಿ ಎಂದು ಸಾಬೀತಾಗಿರುವ ಶಹಜಾದ್ ವಿರುದ್ಧ ಇತರೆ ಪೊಲೀಸರ ಹತ್ಯೆ ಪ್ರಯತ್ನ, ಕರ್ತವ್ಯಕ್ಕೆ ಅಡ್ಡಿ, ಕ್ರಿಮಿನಲ್ ಸಂಚು, ಸಾಕ್ಷ್ಯ ನಾಶ ಮತ್ತು ಶಸ್ತ್ರಾಸ್ತ್ರಗಳ ಕಾಯ್ದೆಯಡಿಯೂ ತಪ್ಪಿತಸ್ಥ ಎಂದು ಘೋಷಿಸಲಾಗಿದೆ.

2008ರಲ್ಲಿ ನಡೆದ ಈ ಎನ್‌ಕೌಂಟರ್ ವೇಳೆ ದೆಹಲಿ ಪೊಲೀಸ್ ವಿಶೇಷ ಪಡೆಯ ಇನ್ಸ್‌ಪೆಕ್ಟರ್ ಎಂ.ಸಿ ಶರ್ಮಾ ಮೃತಪಟ್ಟಿದ್ದರು. ಶರ್ಮಾ ಉಗ್ರರ ಗುಂಡಿಗೆ ಬಲಿಯಾಗಿದ್ದರೇ ಅಥವಾ ಪೊಲೀಸರ ಗುಂಡು ತಗುಲಿ ಮೃತಪಟ್ಟಿದ್ದರೇ ಎನ್ನುವ ಕುರಿತು ಅನೇಕ ಅನುಮಾನಗಳು ಹುಟ್ಟಿಕೊಂಡಿದ್ದವು. ರಾಜಕೀಯ ವಲಯದಲ್ಲಿ ಈ ಎನ್‌ಕೌಂಟರ್ ಪ್ರಕರಣ ತೀವ್ರ ವಾದ-ವಿವಾದಕ್ಕೆ ಕಾರಣವಾಗಿತ್ತು. ಆದರೆ, ಈಗ ನ್ಯಾಯಾಲಯದ ತೀರ್ಪು ಈ ವಿವಾದಕ್ಕೆ ಕೊನೆ ಹಾಡಿದೆ.

ಪ್ರಕರಣದಲ್ಲಿ ಬಂಧಿತ ಶಹಜಾದ್ ಅಹಮದ್‌ನನ್ನು ನ್ಯಾಯಾಲಯ ಗುರುವಾರ ದೋಷಿ ಎಂದು ತೀರ್ಮಾನಿಸಿ ಶಿಕ್ಷೆಯ ಪ್ರಮಾಣವನ್ನು ಜು.29ಕ್ಕೆ ಮುಂದೂಡಿತ್ತು. ಆದರೆ ಅಪರಾಧಿ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಪ್ರತಿವಾದ ಕೇಳಿ ಬಂದ ಹಿನ್ನಲೆಯಲ್ಲಿ ಶಿಕ್ಷೆಯ ಪ್ರಮಾಣವನ್ನು ನಾಳೆ ಪ್ರಕಟಿಸುವ ಸಾಧ್ಯತೆಯಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement