ರಿಲಯನ್ಸ್ ಮತ್ತು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ನೋಟೀಸ್
2014ರಿಂದ ಗ್ಯಾಸ್ ಬೆಲೆ ಹೆಚ್ಚಿಸುವ ನಿರ್ಧಾರ ಕೈಗೊಂಡಿರುವ ಕೇಂದ್ರ ಸರ್ಕಾರ ಮತ್ತು ರಿಲಯನ್ಸ್ ಕಂಪನಿಗೆ ಸುಪ್ರೀಂ ನ್ಯಾಯಾಲಯ...
ನವದೆಹಲಿ: 2014ರಿಂದ ಗ್ಯಾಸ್ ಬೆಲೆ ಹೆಚ್ಚಿಸುವ ನಿರ್ಧಾರ ಕೈಗೊಂಡಿರುವ ಕೇಂದ್ರ ಸರ್ಕಾರ ಮತ್ತು ರಿಲಯನ್ಸ್ ಕಂಪನಿಗೆ ಸುಪ್ರೀಂ ನ್ಯಾಯಾಲಯ ಸೋಮವಾರ ನೋಟೀಸ್ ಜಾರಿ ಮಾಡಿದೆ.
ಸಿಪಿಐ ನಾಯಕ ಮತ್ತು ಹಿರಿಯ ಸಂಸತ್ ಸದಸ್ಯರಾದ ಗುರುದಾಸ್ ದಾಸ್‌ಗುಪ್ತಾ ಅವರು, ಸಮಾಜದಲ್ಲಿ ಅನೇಕ ಪ್ರಮಾಧಗಳು ಉಂಟಾದ ಪರಿಣಾಮ ದೇಶದ ಆರ್ಥಿಕತೆಯ ಕುಗ್ಗಿದೆ, ಅದು ಮುಖ್ಯವಾಗಿ ವಿದ್ಯುತ್ ಮತ್ತು ರಾಸಾಯನಿಕ ಗೊಬ್ಬರ ವಲಯದಲ್ಲಿ ಹೆಚ್ಚು ನಷ್ಟ ಉಂಟಾಗಿದೆ. ಇಂತಹ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಮತ್ತು ರಿಲಯನ್ಸ್ ಕಂಪನಿ 2014ರಿಂದ ಗ್ಯಾಸ್ ಬೆಲೆ ಹೆಚ್ಚಿಸಲು ನಿರ್ಧರಿಸಿದೆ ಎಂದು ಆರೋಪಿಸಿ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಾಮೂರ್ತಿ ಪಿ.ಸತಾಶಿವಂ ಅವರು ಕೇಂದ್ರ ಮತ್ತು ರಿಲಯನ್ಸ್ ಕಂಪನಿಗೆ ನೋಟೀಸ್ ಜಾರಿ ಮಾಡಿದ್ದು, ನಾಲ್ಕು ವಾರಗಳಲ್ಲಿ ನೋಟೀಸ್‌ಗೆ ಉತ್ತರಿಸುವಂತೆ ಸೂಚಿಸಿದ್ದಾರೆ.
ಕ್ಛಷ್ಣಾ-ಗೋದಾವರಿ ಕಣಿವೆಯ ರಿಲಯನ್ಸ್ ಘಟಕದಲ್ಲಿ ಉತ್ಪಾದನೆಯಾಗುವ ಅನಿಲ ದರವನ್ನು ದ್ವಿಗುಣಗೊಳಿಸಿ ಒಂದು ದಶಲಕ್ಷ ಬ್ರಿಟಿಷ್ ಥರ್ಮಲ್ ಯುನಿಟ್‌ಗೆ(ಎಂಬಿಟಿಯು) 4.2 ಅಮೆರಿಕನ್ ಡಾಲ್ರ ನಿಗದಿಪಡಿಸಬೇಕು. ಆದರೆ ಇದರ ಬದಲಾಗಿ ಕೇಂದ್ರ ಸರ್ಕಾರ ಪ್ರತಿ ಎಂಬಿಟಿಯುಗೆ ಮೊದಲ ವರ್ಷ 8 ಡಾಲರ್ ನಿಗದಿಪಡಿಸಲು ನಿರ್ಧರಿಸಿದೆ. ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಕಂಪನಿ ಇಟ್ಟಿರುವ ಬೇಡಿಕೆಯಷ್ಟೇ ದರವನ್ನು ನಿಗದಿಪಡಿಸಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಗುರದಾಸ್ ಆರೋಪಿಸಿದ್ದರು.
ಮಂತ್ರಿ ಮಂಡಲದ ಐವರು ಸಚಿವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರೂ, ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂದು ಆಪಾದಿಸಿದ್ದರು.