ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಬಿಜೆಪಿಗೆ ಹೋದ್ರೆ ವಿಷ ಕೊಡ್ತಾರೆ: ಬಿಎಸ್‌ವೈಗೆ ಸಿದ್ದು ಎಚ್ಚರಿಕೆ

ಮತ್ತೆ ಬಿಜೆಪಿಗೆ ಹೋದ್ರೆ, ಅವರು ನಿಮಗೆ ವಿಷ ಕೊಡ್ತಾರೆ... ಹೋಗುವುದಕ್ಕು ಮುಂಚೆ ಯೋಚನೆ ..

Lingaraj Badiger
Updated On : 30 Jul 2013, 1:17 am

ಬೆಂಗಳೂರು: ಮತ್ತೆ ಬಿಜೆಪಿಗೆ ಹೋದ್ರೆ, ಅವರು ನಿಮಗೆ ವಿಷ ಕೊಡ್ತಾರೆ... ಹೋಗುವುದಕ್ಕು ಮುಂಚೆ ಯೋಚನೆ ಮಾಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಮಾಜಿ ಮುಖ್ಯಮಂತ್ರಿ ಹಾಗೂ ಕೆಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ಮಂಗಳವಾರ ಎಚ್ಚರಿಸಿದ್ದಾರೆ.

ಇಂದು ಸದನದಲ್ಲಿ ಬಜೆಟ್ ಮೇಲಿನ ಚರ್ಚೆಯ ವೇಳೆ ಬಿಎಸ್‌ವೈ ಟಾಂಗ್ ನೀಡಿದ ಸಿದ್ದು, 'ಯಡಿಯೂರಪ್ಪನವರೇ, ಬಿಜೆಪಿ ಜೊತೆ ಮತ್ತೆ ಒಂದಾಗೋ ಮಾತು ಹೇಳಿದ್ದೀರಾ, ಈ ಹಿಂದೆ ಈಗಾಗಲೇ ಕೈ ಸುಟ್ಟುಕೊಂಡಿದ್ದೀರಾ. ಈಗ ಮತ್ತೆ ಬಿಜೆಪಿಗೆ ಹೋದ್ರೆ ವಿಷ ಕೊಡ್ತಾರೆ. ನಾನು ನಿಮ್ಮ ಹಿತೈಷಿಯಾಗಿ ಈ ಮಾತು ಹೇಳುತ್ತಿದ್ದೇನೆ. ಬಿಜೆಪಿಗೆ ಹೋಗುವ ಮೊದಲು ಯೋಚನೆ ಮಾಡಿ' ಎಂದು ಸಲಹೆ ನೀಡಿದರು. ಅಲ್ಲದೆ ನೀವು ಬಿಜೆಪಿ ಜೊತೆ ಸೇರಿದ್ರೂ ನಾವೇ ಹೆಚ್ಚು ಸ್ಥಾನ ಗೆಲ್ಲುತ್ತೇವೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 20ಕ್ಕಿಂತ ಹೆಚ್ಚು ಸ್ಥಾನ ಗೆಲ್ಲುತ್ತೆ ಎಂದು ಸಿದ್ದು ಹೇಳಿದರು.

ಇದೇ ವೇಳೆ ಕಾಂಗ್ರೆಸ್ ಸಮನ್ವಯ ಸಮಿತಿ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, ಇದು ಪಕ್ಷದ ಆಂತರಿಕ ವಿಷಯ. ಕಾಂಗ್ರೆಸ್‌ನಲ್ಲಿ ಒಗ್ಗಟ್ಟು ಹಾಗೂ ಒಳ್ಳೆಯ ವಾತಾವರಣವಿದೆ. ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿನ ಅಂಶಗಳನ್ನು ಸಮರ್ಪಕವಾಗಿ ಜಾರಿಗೆ ತರಲು ಸಮನ್ವಯ ಸಮಿತಿ ರಚಿಸಲಾಗುತ್ತದೆ ಎಂದು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement