ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಬೆಲೆ ಏರಿಕೆಗೆ ಭ್ರಷ್ಟಚಾರ ಕಾರಣ: ಅಣ್ಣಾ ಹಜಾರೆ

Mainashree
Updated On : 30 Jul 2013, 7:20 am

ಜಾನ್‌ಪುರ್: ಬೆಲೆ ಏರಿಕೆಗೆ ದೇಶದಲ್ಲಿರುವ ಭ್ರಷ್ಟಾಚಾರವೇ ಕಾರಣ ಎಂದು ಸಾಮಾಜಿಕ ಕಾರ್ಯಕರ್ತ ಹಾಗೂ ಗಾಂಧಿವಾದಿ ಅಣ್ಣಾ ಹಜಾರೆ ಮಂಗಳವಾರ ಹೇಳಿದ್ದಾರೆ.

ದೇಶದಲ್ಲಿ ಹೆಚ್ಚುತ್ತಿರುವ ಭ್ರಷ್ಚಾಚಾರದ ಫಲಿತಾಂಶವಾಗಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಈಗಾಗಲೇ ಭ್ರಷ್ಚಾಚಾರದಿಂದ ತತ್ತರಿಸುವ ಜನರಿಗೆ ಬೆಲೆ ಏರಿಕೆ ಮಾರಿಯಾಗಿ ಕಾಡುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಇದನ್ನು ತಡೆಗಟ್ಟಬೇಕಾದರೆ ಪ್ರಬಲ ಲೋಕಪಾಲ ಮಸೂದೆ ಜಾರಿಯಾಗಬೇಕು. ಆದರೆ ಕೇಂದ್ರ ಸರ್ಕಾರ ಇದನ್ನು ಜಾರಿ ಮಾಡುವಲ್ಲಿ ನಿರ್ಲಕ್ಷ್ಯ ತೋರಿದೆ. ಆದ್ದರಿಂದ ಜನರು ಸರಿಯಾದ ರೀತಿಯಲ್ಲಿ ಜನ ಪ್ರತಿನಿಧಿಗಳನ್ನು ಆಯ್ಕೆ ಮಾಡಬೇಕು ಎಂದು ಹೇಳಿದ್ದಾರೆ.

ಪ್ರಬಲ ಲೋಕಪಾಲ್ ಜಾರಿಯಾದರೆ ಭ್ರಷ್ಟಾಚಾರದಲ್ಲಿ ಬಳಕೆಯಾಗುತ್ತಿರುವ ಹಣವನ್ನು ದೇಶದ ಅಭಿವೃದ್ಧಿ ಕಾರ್ಯಗಳಿಗೆ ಬಳಸಬಹುದು. ಜನರು ಜನ ಪ್ರತಿನಿಧಿಗಳನ್ನಾ ಆಯ್ಕೆ ಮಾಡಬೇಕಾದರೆ ಪ್ರತಿನಿಧಿಗಳ ಕಾರ್ಯ, ಅವರ ನಡೆತೆ ಸೇರಿದಂತೆ ದೇಶಕ್ಕೆ ಕೊಡುಗೆ ನೀಡುವಂತಹ ವ್ಯಕ್ತಿಯನ್ನು ಆಯ್ಕೆ ಮಾಡಬೇಕು.

ಇಂತಹ ವ್ಯಕ್ತಿಗಳನ್ನು ಆಯ್ಕೆ ಮಾಡಿದರೆ ಮಾತ್ರ ಅವರು ದೇಶಕ್ಕಾಗಿ ದುಡಿಯಲು ಸಾಧ್ಯ. ಆಗ ಮಾತ್ರ ದೇಶದ ಭ್ರಷ್ಟಾಚಾರ ಮತ್ತು ಬೆಲೆ ಏರಿಕೆ ಪಿಡುಗು ತಡೆಗಟ್ಟಬಹುದು ಎಂದು ಅಣ್ಣಾ ಹಜಾರೆ ಅಭಿಪ್ರಾಯಪಟ್ಟಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement