ಶ್ರೀಶಾಂತ್ ಜಾಮೀನು ರದ್ದು ಕೋರಿ ಪೊಲೀಸರಿಂದ ಅರ್ಜಿ
ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದ ಪ್ರಮುಖ ಆರೋಪಿ ಕ್ರಿಕೆಟಿಗ ಶ್ರೀಶಾಂತ್ಗೆ ಭಾರಿ ಹಿನ್ನಡೆಯಾಗಿದೆ. ಶ್ರೀಶಾಂತ್ ..
ನವದೆಹಲಿ: ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದ ಪ್ರಮುಖ ಆರೋಪಿ ಕ್ರಿಕೆಟಿಗ ಶ್ರೀಶಾಂತ್ಗೆ ಭಾರಿ ಹಿನ್ನಡೆಯಾಗಿದೆ. ಶ್ರೀಶಾಂತ್ ಸೇರಿದಂತೆ ಇತರೆ 20 ಆರೋಪಿಗಳ ಜಾಮೀನು ರದ್ದು ಕೋರಿ ಅರ್ಜಿ ಸಲ್ಲಿಸಲು ದೆಹಲಿ ಪೊಲೀಸರು ನಿರ್ಧರಿಸಿದ್ದಾರೆ.
ಸ್ಪಾಟ್ ಫಿಕ್ಸಿಂಗ್ ಪ್ರಕರಣ ಸಂಬಂಧ ಇಂದು ನಾವು ಚಾರ್ಜ್ಶೀಟ್ ಹಾಕುತ್ತಿದ್ದೇವೆ. ಹೀಗಾಗಿ ಶ್ರೀಶಾಂತ್ ಸೇರಿದಂತೆ ಇತರ 20 ಆರೋಪಿಗಳ ಜಾಮೀನು ರದ್ದುಗೊಳಿಸುವಂತೆ ಕೋರ್ಟ್ಗೆ ಮನವಿ ಮಾಡಲಾಗುವುದು ಎಂದು ದೆಹಲಿ ವಿಶೇಷ ಪೊಲೀಸ್ ಆಯುಕ್ತ ಎಸ್.ಎನ್. ಶ್ರೀವತ್ಸವ ಅವರು ಹೇಳಿದ್ದಾರೆ.
ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣ ಸಂಬಂಧ ಈವರೆಗೆ 29 ಮಂದಿಯನ್ನು ಬಂಧಿಸಲಾಗಿದ್ದು, ಈ ಪೈಕಿ 21 ಆರೋಪಿಗಳು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರೆ, ಇತರೆ ಎಂಟು ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಪ್ರಕರಣ ಸಂಬಂಧ ರಾಜಸ್ಥಾನ ರಾಯಲ್ಸ್ ತಂಡದ ಮೂವರು ಆಟಗಾರರಾದ ಶ್ರೀಶಾಂತ್, ಅಂಕೀತ್ ಚೌವ್ಹಾಣ್ ಮತ್ತು ಅಜಿತ್ ಚಾಂಡಿಲ ಅವರನ್ನು ಕಳೆದ ಮೇ 16ರಂದು ಮುಂಬೈಯಲ್ಲಿ ದೆಹಲಿ ಪೊಲೀಸರು ಬಂಧಿಸಿದ್ದರು. ನಂತರ ಶ್ರೀಶಾಂತ್ ಹಾಗೂ ಚೌವ್ಹಾಣ್ ಜಾಮೀನನ ಮೇಲೆ ಬಿಡುಗಡೆಯಾಗಿದ್ದರು. ಆದರೆ ಮತ್ತೊರ್ವ ಆಟಗಾರ ಚಾಂಡಿಲ ಮಾತ್ರ ಇನ್ನು ತಿಹಾರ್ ಜೈಲಲ್ಲೇ ಇದ್ದಾರೆ.