ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಸ್ಪಾಟ್ ಫಿಕ್ಸಿಂಗ್: ದಾವೂದ್, ಶ್ರೀಶಾಂತ್ ವಿರುದ್ಧ ಚಾರ್ಜ್‌ಶೀಟ್

ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಪ್ರಕರಣ ಸಂಬಂಧ ಮಂಗಳವಾರ ದೆಹಲಿ ಪೊಲೀಸರು ..

Lingaraj Badiger
Updated On : 30 Jul 2013, 4:43 am

ನವದೆಹಲಿ: ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಪ್ರಕರಣ ಸಂಬಂಧ ಮಂಗಳವಾರ ದೆಹಲಿ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ.

ಭೂಗತ ಪಾತಕಿ ದಾವೂದ್ ಇಬ್ರಾಹಿಂ, ಛೋಟಾ ಶಕೀಲ್ ಹಾಗೂ ಕ್ರಿಕೆಟಿಗರಾದ ಶ್ರೀಶಾಂತ್, ಅಂಕೀತ್ ಚೌವ್ಹಾಣ್ ಮತ್ತು ಅಜಿತ್ ಚಾಂಡಿಲ ಸೇರಿದಂತೆ 39 ಆರೋಪಿಗಳ ವಿರುದ್ಧ ಇಂದು ದೆಹಲಿ ಪೊಲೀಸರು ಸುದೀರ್ಘ 6000 ಪುಟಗಳ ಚಾರ್ಜ್‌ಶೀಟ್ ದಾಖಲಿಸಿದ್ದಾರೆ.

ದಾವೂದ್ ಹಾಗೂ ಛೋಟಾ ಶಕೀಲ್ ಸ್ಪಾಟ್ ಫಕ್ಸಿಂಗ್‌ನ ಪ್ರಮುಖ ರೂವಾರಿಗಳಾಗಿದ್ದು, ಕ್ರಿಕೆಟಿಗ ಶ್ರೀಶಾಂತ್ ಅದನ್ನು ಕಾರ್ಯಗತಗೊಳಿಸಿದ್ದ ಎಂದು ದೆಹಲಿ ಪೊಲೀಸರು ಚಾರ್ಜ್‌ಶೀಟ್‌ನಲ್ಲಿ ತಿಳಿಸಿದ್ದಾರೆ.

ಸ್ಪಾಟ್ ಫಿಕ್ಸಿಂಗ್ ಹಾಗೂ ಬೆಟ್ಟಿಂಗ್‌ನಲ್ಲಿ ಪಾಕಿಸ್ತಾನದ ಬುಕ್ಕಿಗಳು ಭಾರತದ ಬುಕ್ಕಿಗಳನ್ನು ನಿಯಂತ್ರಿಸುತ್ತಿದ್ದಾರೆ ಎಂದು ದೆಹಲಿ ಪೊಲೀಸರು ದೂರಿದ್ದಾರೆ.

ಇನ್ನು ಪ್ರಕರಣ ಸಂಬಂಧ ಶ್ರೀಶಾಂತ್ ಸೇರಿದಂತೆ ಇತರ 20 ಆರೋಪಿಗಳ ಜಾಮೀನು ರದ್ದುಗೊಳಿಸುವಂತೆ ಕೋರ್ಟ್‌ಗೆ ಮನವಿ ಮಾಡಲಾಗುವುದು ಎಂದು ದೆಹಲಿ ವಿಶೇಷ ಪೊಲೀಸ್ ಆಯುಕ್ತ ಎಸ್.ಎನ್. ಶ್ರೀವತ್ಸವ ಅವರು ತಿಳಿಸಿದ್ದಾರೆ.

ಪ್ರಕರಣ ಸಂಬಂಧ ರಾಜಸ್ಥಾನ ರಾಯಲ್ಸ್ ತಂಡದ ಮೂವರು ಆಟಗಾರರಾದ ಶ್ರೀಶಾಂತ್, ಅಂಕೀತ್ ಚೌವ್ಹಾಣ್ ಮತ್ತು ಅಜಿತ್ ಚಾಂಡಿಲ ಅವರನ್ನು ಕಳೆದ ಮೇ 16ರಂದು ಮುಂಬೈಯಲ್ಲಿ ದೆಹಲಿ ಪೊಲೀಸರು ಬಂಧಿಸಿದ್ದರು. ನಂತರ ಶ್ರೀಶಾಂತ್ ಹಾಗೂ ಚೌವ್ಹಾಣ್ ಜಾಮೀನನ ಮೇಲೆ ಬಿಡುಗಡೆಯಾಗಿದ್ದರು. ಆದರೆ ಮತ್ತೊರ್ವ ಆಟಗಾರ ಚಾಂಡಿಲ ಮಾತ್ರ ಇನ್ನು ತಿಹಾರ್ ಜೈಲಲ್ಲೇ ಇದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement