ಐಟಿ ರಿಟರ್ನ್ಸ್ ಡೆಡ್ಲೈನ್ ಮುಂದೂಡಿಕೆ, ಆ.5 ಕಡೆ ದಿನ
ಆದಾಯ ತೆರಿಗೆ ಇಲಾಖೆ ಐಟಿ ರಿಟನ್ಸ್ ಫೈಲ್ ಮಾಡುವ ದಿನಾಂಕವನ್ನು ಬುಧವಾರ ಮುಂದೂಡಿದ್ದು,..
ನವದೆಹಲಿ: ಆದಾಯ ತೆರಿಗೆ ಇಲಾಖೆ ಐಟಿ ರಿಟನ್ಸ್ ಫೈಲ್ ಮಾಡುವ ದಿನಾಂಕವನ್ನು ಬುಧವಾರ ಮುಂದೂಡಿದ್ದು, ಈಗ ಆಗಸ್ಟ್ 5ರ ವರೆಗೆ ಅವಕಾಶ ನೀಡಿದೆ. ಈ ಮುಂಚೆ ಐಟಿ ರಿಟರ್ನ್ಸ್ ಫೈಲ್ ಮಾಡಲು ಇಂದೆ ಕೊನೆ ದಿನವಾಗಿತ್ತು.
ವಾರ್ಷಿಕ ಐದು ಲಕ್ಷಕಿಂತ ಹೆಚ್ಚು ಆದಾಯ ಇರುವವರು ಕಡ್ಡಾಯವಾಗಿ ಇ-ಫೈಲ್ ಮಾಡುವ ಅಗತ್ಯ ಇದೆ. ಕಳೆದ ವರ್ಷ 10 ಲಕ್ಷಕ್ಕಿಂತ ಹೆಚ್ಚು ಆದಾಯ ಇರುವವರಿಗೆ ಮಾತ್ರ ಇ-ಫೈಲಿಂಗ್ಗೆ ಅವಕಾಶ ಕಲ್ಪಿಸಲಾಗಿತ್ತು.