ಮತ್ತೆ ಬಿಸಿಯೂಟ ಸೇವನೆ: 65 ಶಾಲಾ ಮಕ್ಕಳು ಅಸ್ವಸ್ಥ
ಬಿಹಾರ: ಬಿಹಾರದ ಅರ್ವಾಲ ಜಿಲ್ಲಿಯ ಚಾಮಂಡಿ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಬಿಸಿಯೂಟ ಸೇವಿಸಿದ 65 ಶಾಲಾ ಮಕ್ಕಳು ಅಸ್ವಸ್ಥರಾಗಿದ್ದು, ಆರು ವಿದ್ಯಾರ್ಥಿಗಳ ಸ್ಥಿತಿ ಚಿಂತಾಜನಕವಾಗಿದೆ.
ಜುಲೈ 16ರಂದು ಬಿಹಾರದ ಧರ್ಮಸತಿ ಗಂಡಮಾನ್ ಹಳ್ಳಿಯಲ್ಲಿರುವ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 23 ಮಕ್ಕಳು ಸಾವನ್ನಪ್ಪಿದ್ದರು. ಇದರ ಬೆನ್ನಲ್ಲೆ ಇಂದು ಬಿಸಿಯೂಟ ಸೇವಿಸಿದ 65 ಮಕ್ಕಳು ಅಸ್ವಸ್ಥರಾಗಿದ್ದು, 6 ಮಕ್ಕಳ ಸ್ಥಿತಿ ಗಂಭೀರವಾಗಿದೆ ಎಂದು ಮೂಲಗಳು ತಿಳಿಸಿವೆ.
ಅಸ್ವಸ್ಥಗೊಂಡ ಮಕ್ಕಳನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಉಪವಿಭಾಗ ಅಧಿಕಾರಿ ತಿಳಿಸಿದ್ದಾರೆ.
ಇದೇ ವೇಳೆ ಘಟನೆ ಕಂಡು ಆಕ್ರೋಶಗೊಂಡ ಹಳ್ಳಿ ಜನರು ಆಡಳಿತ ಮಂಡಳಿ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.