ಮುಷರಫ್ ಫಾರ್ಮ್ ಹೌಸ್ ಮೇಲೆ ದಾಳಿಗೆ ಉಗ್ರರ ಸಂಚು: ವರದಿ
ಇಸ್ಲಾಮಾಬಾದ್: ತಾಲಿಬಾನ್ ಉಗ್ರರು ಪಾಕಿಸ್ತಾನದ ಮಾಜಿ ಅಧ್ಯಕ್ಷ ಪವೇರ್ಜ್ ಮುಷರಫ್ ಅವರ ಫಾರ್ಮ್ ಹೌಸ್ ಮೇಲೆ ದಾಳಿ ಮಾಡಲು ಸಂಚು ಹೂಡಿದ್ದಾರೆ ಎಂದು ವರದಿ ತಿಳಿಸಿದೆ.
ಇತ್ತೀಚೆಗಷ್ಟೇ ತಾಲಿಬಾನ್ ಉಗ್ರರು ಪಾಕಿಸ್ತಾನದ ಕೇಂದ್ರ ಜೈಲಿನ ಮೇಲೆ ದಾಳಿ ಮಾಡಿ 300 ತಾಲಿಬಾನ್ ಉಗ್ರರನ್ನು ರಕ್ಷಿಸಿದ್ದರು. ಇದರ ಬೆನ್ನಲ್ಲೇ ಮುಷರಫ್ ಅವರ ಫಾರ್ಮ್ ಹೌಸ್ ಮೇಲೆ ದಾಳಿ ಮಾಡಲು ಸಂಚು ಹೂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮುಷರಫ್ ಅವರ ಮೇಲೆ ಅನೇಕ ಕ್ರಿಮಿನಲ್ ಮೊಕದ್ದಮೆಗಳಿದ್ದು, ಈ ಸಂಬಂಧ ಇಸ್ಲಾಮಾಬಾದಿನಲ್ಲಿರುವ ಮುಷರಫ್ ಅವರ ಫಾರ್ಮ್ ಹೌಸ್‌ನಲ್ಲಿ ಪೊಲೀಸರು ಅವರನ್ನು ಬಂಧಿಸಿದ್ದರು. ನಂತರ ಮುಷರಫ್ ಅವರ ಫಾರ್ಮ್‌ಹೌಸ್‌ನ್ನು ಸಬ್ ಜೈಲಾಗಿ ಪರಿವರ್ತನೆ ಮಾಡಿ ಪ್ರಕರಣದ ವಿಚಾರಣೆಯನ್ನು ಅಲ್ಲೇ ನಡೆಸಲಾಗುತ್ತಿತ್ತು ಎಂದು ತಿಳಿದು ಬಂದಿದೆ.
7 ಆತ್ಮಾಹುತಿ ಬಾಂಬರ್‌ಗಳು ಸೇರಿದಂತೆ 100 ತಾಲಿಬಾನ್ ಉಗ್ರರು ಸೋಮವಾರ ರಾತ್ರಿ ಪಾಕಿಸ್ತಾನದ ಜೈಲಿನ ಮೇಲೆ ದಾಳಿ ನಡೆಸಿ, 300 ತಾಲಿಬಾನ್ ಉಗ್ರರನ್ನು ರಕ್ಷಿಸಿ, ಇತರೆ ಖೈದಿಗಳು ಸೇರಿದಂತೆ ಅಧಿಕಾರಿಗಳನ್ನು ಹತ್ಯೆಗೈದಿದ್ದರು.
ತಾಲಿಬಾನ್ ಉಗ್ರರು ದಾಳಿ ಮಾಡಲಿದ್ದಾರೆ ಎಂದು ಮಾಹಿತಿ ದೊರೆತ ಹಿನ್ನಲೆಯಲ್ಲಿ ಫಾರ್ಮ್‌ಹೌಸ್‌ಗೆ ಬಿಗಿ ಭದ್ರತೆ ಕಲ್ಪಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.