ಕೈಲಾಸ ಮಾನಸ ಸರೋವರ ಯಾತ್ರೆ ರದ್ದುಗೊಳಿಸಿದ ಸರ್ಕಾರ
ನವದೆಹಲಿ: ನಿರಂತರ ಮಳೆ ಸುರಿಯುತ್ತಿರುವ ಹಿನ್ನಲೆಯಲ್ಲಿ ಕೈಲಾಸ ಮಾನಸ ಸರೋವರದ ಸಂಪೂರ್ಣ ಯಾತ್ರೆಯನ್ನು ಸರ್ಕಾರ ಗುರುವಾರದಿಂದ ರದ್ದುಗೊಳಿಸಿದೆ.
ಉತ್ತರಾಖಂಡದಲ್ಲಿ ಉಂಟಾದ ಪ್ರವಾಹದಿಂದ ಸಾವಿರಾರು ಜನರು ಸಾವನ್ನಪ್ಪಿದ್ದರ ಪರಿಣಾಮವಾಗಿ ಸರ್ಕಾರ ಕ್ರಮ ಕೈಗೊಳ್ಳಲು ಮುಂದಾಗಿದೆ. ಕೈಲಾಸ ಮಾನಸ ಸರೋವರ ಪೂರ್ಣ ಯಾತ್ರೆಯನ್ನು ಸರ್ಕಾರ ರದ್ದುಗೊಳಿಸಿದೆ.
ಭಾರಿ ಮಳೆಯಿಂದಾಗಿ ಭೂಕುಸಿತ, ರಸ್ತೆ ಕುಸಿತ ಎಚ್ಚಾಗುತ್ತಿದ್ದೆ. ನದಿಗಳು ತುಂಬಿ ಹರಿಯುತ್ತಿದ್ದು, ಅಣೆಕಟ್ಟುಗಳು ಸಹ ತುಂಬಿ ಹೋಗುವ ಸಾಧ್ಯತೆ ಇರುವುದರಿಂದ ಯಾವುದೇ ಸಂದಂರ್ಭದಲ್ಲೂ ಅನಾಹುತ ಸಂಭವಿಸಬಹುದು ಎಂಬ ಹಿನ್ನಲೆಯಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿದೆ ಎಂದು ಮೂಲಗಳು ತಿಳಿಸಿವೆ.