ರಾಜ್ಯಗಳ ವಿಭಜನೆ ದೇಶದ ಶಕ್ತಿಯನ್ನು ಕುಗ್ಗಿಸಲಿದೆ: ಅಣ್ಣಾ ಹಜಾರೆ
ಉತ್ತರಪ್ರದೇಶ: ರಾಜ್ಯಗಳನ್ನು ವಿಭಜಿಸುವುದು ದೇಶದ ಶಕ್ತಿಯನ್ನು ಕುಗ್ಗಿಸುವಂತೆ ಎಂದು ಸಾಮಾಜಿಕ ಕಾರ್ಯಕರ್ತ ಹಾಗೂ ಗಾಂಧಿವಾದಿ ಅಣ್ಣಾ ಹಜಾರೆ ಗುರುವಾರ ಹೇಳಿದ್ದಾರೆ.
ಆಂಧ್ರ ಪ್ರದೇಶ ವಿಭಜನೆಗೆ ವಿಷಾಧಿಸಿರುವ ಅಣ್ಣಾ ಹಜಾರೆ, ಪ್ರತ್ಯೇಕ ತೆಲಂಗಾಣ ಮಾಡಿ ಕೇವಲ ಹೊಸ ರಾಜ್ಯ ಹುಟ್ಟಿಕೊಂಡಂತೆ ಅಲ್ಲ ಇದರ ಜೊತೆಗೆ ಹೊಸ ಜಿಲ್ಲೆಗಳು ಹುಟ್ಟಿಕೊಳ್ಳುತ್ತವೆ. ಇದರಿಂದ ಜಿಲ್ಲೆಗಳು ವಿಭಜನೆ ಆಗುತ್ತಾ ದೇಶದ ಒಗ್ಗಟ್ಟುನ್ನು ಮುರಿಯುತ್ತಾ ಹೋಗುತ್ತದೆ ಎಂದು ಹಜಾರೆ ತಿಳಿಸಿದ್ದಾರೆ.
ಇದೇ ರೀತಿ ರಾಜ್ಯದ ವಿಭಜನೆ ಹೆಚ್ಚಾದರೇ ದೇಶ ಹಿಂದುಳಿಯಲಿದೆ ಎಂದು ಹಜಾರೆ ಹೇಳಿದ್ದಾರೆ.
ಇದೇ ವೇಳೆ ಅಧಿಕಾರಿ ಅಮಾನತಿನ ಬಗ್ಗೆ ಪ್ರತಿಕ್ರಯಿಸಿರುವ ಹಜಾರೆ, ಉತ್ತರ ಪ್ರದೇಶದ ಐಎಎಸ್ ಅಧಿಕಾರಿ ದುರ್ಗಾಶಕ್ತಿ ನಾಗ್‌ಪಾಲ್ ಅವರ ಅಮಾನತು ಬೇಸರ ತಂದಿದೆ. ಈಗಿನ ಕಾಲದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುವಂತಹ ಅಧಿಕಾರಿಗಳು ಕಡಿಮೆ. ಹೀಗಿರಬೇಕಾದರೆ ನ್ಯಾಯದ ಪರವಾಗಿ ದುರ್ಗಾಶಕ್ತಿ ಕೆಲಸ ಮಾಡಿದ್ದಾರೆ. ಅವರನ್ನು ಅಮಾನತುಗೊಳಿಸಿರುವುದರ ಬಗ್ಗೆ ಸರ್ಕಾರ ಮರುಪರಿಶೀಲನೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.