ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಸುಳ್ಳು ಅತ್ಯಾಚಾರ ಕೇಸು ದಾಖಲಿಸುವವರ ವಿರುದ್ಧ ಕ್ರಮ: "ಹೈ"

Mainashree
Updated On : 1 Aug 2013, 6:07 am

ಮುಂಬೈ: ಸುಳ್ಳು ಅತ್ಯಾಚಾರ ಪ್ರಕರಣಗಳನ್ನು ದಾಖಲಿಸುವಂತಹ ಮಹಿಳೆಯರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಮುಂಬೈ ಹೈಕೋರ್ಟ್ ಗುರುವಾರ ಆದೇಶಿಸಿದೆ.

ನ್ಯಾಯಾಮೂರ್ತಿ ಸಾಧನ ಜಾದವ್ ಅವರು ಈ ಆದೇಶ ಹೊರಡಿಸಿದ್ದಾರೆ. ಇತ್ತೀಚೆಗೆ ಮಹಿಳೆಯರು ಅವಶೇಷದಿಂದ ತಮ್ಮ ಪುರಷರನ್ನು ಪ್ರಕರಣದಲ್ಲಿ ಸಿಲುಕಿಸಲು ಅತ್ಯಾಚಾರ ಪ್ರಕರಣ ದಾಖಲಿಸುತ್ತಾರೆ. ನಂತರ ದಾಖಲಿಸಿರುವ ದೂರನ್ನು ಹಿಂಪಡೆದು, ಪ್ರಕರಣದಿಂದ ಹಿಂದೆ ಸರಿಯುವುದು ಈಗಿನ ಟ್ರೆಂಡ್ ಆಗಿಬಿಟ್ಟಿದೆ.

ಇನ್ನೂ ಮುಂದೆ ದಾಖಲಾಗುವ ಇಂತಹ ಪ್ರಕರಣಗಳ ವಿಚಾರಣೆಯನ್ನು ನಡೆಸಬೇಕು. ಕೆಲ ಮಹಿಳೆಯರು ತಾಳ್ಮೆ ಕಳೆದುಕೊಂಡು ದೂರು ದಾಖಲಿಸಿ ನಂತರ ಅದರಿಂದ ಹಿಂದೆ ಸರಿಯುತ್ತಾರೆ. ಇಂತಹ ಪ್ರಕರಣಗಳು ಹೆಚ್ಚಾಗಿರುವುದಿಂದ ನ್ಯಾಯಾಲಯದ ಸಮಯ ವ್ಯರ್ಥವಾಗುತ್ತಿದೆ.

ಇದಲ್ಲದೇ, ಮದುವೆ ಆಗುವುದಾಗಿ ನಂಬಿಸಿದ ಪುರುಷನೊಂದಿಗೆ ದೈಹಿಕ ಸಂಪರ್ಕಕಕ್ಕೆ ಸಮ್ಮತಿಸಿ ನಂತರ ಆತನು ಬಿಟ್ಟು ಹೋದಾಗ ಅವನ ವಿರುದ್ಧ ಅತ್ಯಾಚಾರ ಪ್ರಕರಣಗಳನ್ನು ದಾಖಲಿಸುತ್ತಾರೆ. ಇದಾದ ಕೆಲವೇ ದಿನಗಳಲ್ಲಿ ಕೊಟ್ಟಿರುವಂತಹ ದೂರನ್ನು ಹಿಂಪಡೆಯುತ್ತಾರೆ. ಇಂತಹ ಸಾವಿರಾರು ಪ್ರಕರಣಗಳನ್ನು ಪ್ರತಿದಿನ ನೋಡಲಾಗುತ್ತಿದೆ.

ಆದ್ದರಿಂದ ಇಂತಹ ಪ್ರಕರಣಗಳ ವಿಚಾರಣೆ ನಡೆಸಬೇಕು ಹಾಗೂ ಸುಳ್ಳು ಕೇಸು ದಾಖಲಿಸಿದ್ದಾರೆ ಎಂದು ದೃಢಪಟ್ಟರೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಸೂಚಿಸಿದ್ದಾರೆ.

ಪೊಲೀಸರು ಪ್ರಕರಣ ದಾಖಲಿಸುವ ಮೊದಲು ಮಹಿಳೆ ಮೇಲೆ ಅತ್ಯಾಚಾರ ನಡೆದಿದಿಯೋ ಅಥವಾ ಇಲ್ಲವೋ ಎಂಬುದರ ಬಗ್ಗೆ ದೃಢಪಡಿಸಿಕೊಂಡು ನಂತರ ಪ್ರಕರಣ ದಾಖಲಿಸಕೊಳ್ಳಬೇಕು ಎಂದು ಹೈ ಕೋರ್ಟ್ ಸೂಚಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement