ಬನ್ಸಲ್‌ಗೆ ಸಿಬಿಐಯಿಂದ ಸಮನ್ಸ್ ಜಾರಿ
ಲಂಚ ಪ್ರಕರಣ ಸಂಬಂಧ ಮಾಜಿ ರೇಲ್ವೆ ಸಚಿವ ಪವನ್ ಕುಮಾರ್ ಬನ್ಸಲ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ..
ನವದೆಹಲಿ: ಲಂಚ ಪ್ರಕರಣ ಸಂಬಂಧ ಮಾಜಿ ರೇಲ್ವೆ ಸಚಿವ ಪವನ್ ಕುಮಾರ್ ಬನ್ಸಲ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸಿಬಿಐ ಮಂಗಳವಾರ ಸಮನ್ಸ್ ಜಾರಿ ಮಾಡಿದೆ.
ರೇಲ್ವೆ ಲಂಚ ಪ್ರಕರಣ ಸಂಬಂಧ ಇಂದು ಮಧ್ಯಾಹ್ನ ವಿಚಾರಣೆಗೆ ಹಾಜರಾಗುವಂತೆ ಬನ್ಸಲ್‌ಗೆ ಸೂಚಿಸಲಾಗಿದೆ ಎಂದು ಸಿಬಿಐ ಮೂಲಗಳು ತಿಳಿಸಿವೆ.
ರೇಲ್ವೆ ಮಂಡಳಿಯ ಅಮಾನತುಗೊಂಡಿರುವ ಸದಸ್ಯ ಮಹೇಶ್ ಕುಮಾರ್ ಹಾಗೂ 90 ಲಕ್ಷ ಲಂಚ ಸ್ವೀಕರಿಸುವ ಸಿಕ್ಕಿಬಿದ್ದ ಬನ್ಸಲ್ ಸಂಬಂಧಿ ವಿಜಯ್ ಸಿಂಗ್ಲಾ ಅವರ ನೇಮಕಾತಿಯಲ್ಲಿ ಬನ್ಸಲ್ ಪಾತ್ರವಿದೆಯೇ ಎಂಬುದರ ಬಗ್ಗೆ ಸಿಬಿಐ ಇಂದು ವಿಚಾರಣೆಗೆ ಒಳಪಡಿಸಲಿದೆ.
ಪವನ್ ಕುಮಾರ್ ಬನ್ಸಲ್ ಅವರು ಏ.16ರಂದು ಮಹೇಶ್ ಕುಮಾರ್ ಅವರನ್ನು ಭೇಟಿಯಾಗಿದ್ದು, ಈ ಸಂದರ್ಭದಲ್ಲಿ ಜನರಲ್ ಮ್ಯಾನೇಜರ್ ಆಗಿ ಕುಮಾರ್‌ರನ್ನು ನೇಮಕಾತಿ ಮಾಡುವ ಬಗ್ಗೆ ಚರ್ಚೆ ನಡೆದಿತ್ತು ಎಂಬುದುನ್ನು ಸಿಬಿಐ ಪತ್ತೆಹಚ್ಚಿದೆ ಎಂದು ಮೂಲಗಳು ತಿಳಿಸಿವೆ. ಹೀಗಾಗಿ ನೇಮಕಾತಿಯಲ್ಲಿ ಬನ್ಸಲ್ ಪಾತ್ರದ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸಲು ಸಿಬಿಐ ಮುಂದಾಗಿದೆ.