ಪ.ಬಂಗಾಳ ಉಪ ಚುನಾವಣೆ: ಟಿಎಂಸಿಗೆ ಗೆಲುವು
ಪಶ್ಚಿಮ ಬಂಗಾಳದ ಹೌರಾ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯ ಫಲಿತಾಂಶ ಬುಧವಾರ ಹೊರ ..
ಕೋಲ್ಕತಾ: ಪಶ್ಚಿಮ ಬಂಗಾಳದ ಹೌರಾ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯ ಫಲಿತಾಂಶ ಬುಧವಾರ ಹೊರ ಬಿದ್ದಿದ್ದು, ತೃಣಮೂಲಕ ಕಾಂಗ್ರೆಸ್ ಅಭ್ಯರ್ಥಿ ಪ್ರಸುನ್ ಬ್ಯಾನರ್ಜಿ ಅವರು ಜಯ ಗಳಿಸಿದ್ದಾರೆ.
ಪ್ರಸುನ್ ಬ್ಯಾನರ್ಜಿ ಅವರು ತಮ್ಮ ಪ್ರತಿಸ್ಪರ್ಧಿ ಸಿಪಿಐ(ಎಂ)ನ ಶ್ರೀದಿಪ್ ಭಟ್ಟಾಚಾರರ್ಜಿ ಅವರ ವಿರುದ್ಧ 27,000 ಮತಗಳ ಅಂತರದಿಂದ ಭರ್ಜರಿ ಜಯ ಸಾಧಿಸಿದ್ದಾರೆ. ಪ್ರಸುನ್ ಬ್ಯಾನರ್ಜಿ ಅವರು ಒಟ್ಟು 4,26,273 ಮತಗಳನ್ನು ಪಡೆದರೆ, ಶ್ರೀದಿಪ್ ಅವರು 3,99,258 ಮತಗಳನ್ನು ಪಡೆದುಕೊಂಡಿದ್ದಾರೆ. ಇನ್ನು ಮೂರನೇ ಸ್ಥಾನಕ್ಕೆ ಕುಸಿದಿರುವ ಕಾಂಗ್ರೆಸ್ ಅಭ್ಯರ್ಥಿ ಸನತನ್ ಮುಖರ್ಜಿ ಅವರು 96,727 ಮತಗಳನ್ನು ಪಡೆದಿದ್ದಾರೆ.
ಟಿಎಂಸಿ ಸಂಸದೆ ಅಂಬಿಕಾ ಬ್ಯಾನರ್ಜಿ ಅವರ ನಿಧನದಿಂದಾಗಿ ತೆರವಾಗಿದ್ದ ಹೌರಾ ಲೋಕಸಭಾ ಸ್ಥಾನಕ್ಕೆ ಕಳೆದ ವಾರ ಚುನಾವಣೆ ನಡೆದಿತ್ತು.