ಉಪ ಚುನಾವಣೆ ಸೋಲು, ಪಕ್ಷಕ್ಕೆ ನಷ್ಟವಿಲ್ಲ್ಲ: ನಿತೀಶ್ ಕುಮಾರ್
ಮಹಾರಾಜ್ಗಂಜ್ ಲೋಕಸಭಾ ಉಪ ಚುನಾವಣೆಯ ಸೋಲಿನಿಂದ ಜೆಡಿಯುಗೆ ಯಾವುದೇ ನಷ್ಟವಾಗಿಲ್ಲ ಎಂದು ಬಿಹಾರ ..
ಪಾಟ್ನಾ: ಮಹಾರಾಜ್ಗಂಜ್ ಲೋಕಸಭಾ ಉಪ ಚುನಾವಣೆಯ ಸೋಲಿನಿಂದ ಜೆಡಿಯುಗೆ ಯಾವುದೇ ನಷ್ಟವಾಗಿಲ್ಲ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಗುರುವಾರ ಹೇಳಿದ್ದಾರೆ.
ಕಳೆದ ಭಾನುವಾರ ನಡೆದ ಉಪ ಚುನಾವಣೆಯ ಫಲಿತಾಂಶ ನಿನ್ನೆ ಪ್ರಕಟಗೊಂಡಿದ್ದು, ನಿತೀಶ್ ಕುಮಾರ್ ಹಾಗೂ ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಪ್ರತಿಷ್ಠೆಯ ಕಣವಾಗಿದ್ದ ಮಹಾರಾಜ್ಗಂಜ್ನಲ್ಲಿ ನಿತೀಶ್ಗೆ ತೀವ್ರ ಮುಖಭಂಗವಾಗಿತ್ತು. ಈ ಬಗ್ಗೆ ಇಂದು ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ನಿತೀಶ್, ಉಪ ಚುನಾವಣೆಯ ಸೋಲಿನಿಂದ ಪಕ್ಷಕ್ಕೆ ಯಾವುದೇ ನಷ್ಟವಾಗಿಲ್ಲ. 2009ರಲ್ಲೂ ಗೆಲುವು ಸಾಧಿಸಿದ್ದ ಆರ್ಜೆಡಿ ಈ ಭಾರಿಯೂ ತನ್ನ ಸ್ಥಾನ ಉಳಿಸಿಕೊಂಡಿದೆ ಅಷ್ಟೆ ಎಂದಿದ್ದಾರೆ.
ಇದು ಪಕ್ಷದ ಸಂಪೂರ್ಣ ಸೋಲಲ್ಲ. ಅದು ಆರ್ಜೆಡಿ ಸ್ಥಾನ, ಅದನ್ನು ಉಳಿಸಿಕೊಂಡಿದೆ ಎಂದು ನಿತೀಶ್ ಕುಮಾರ್ ವರದಿಗಾರರಿಗೆ ತಿಳಿಸಿದರು. ಅಲ್ಲದೆ ಈ ಸೋಲಿನಿಂದ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಸ್ಪಷ್ಟಪಡಿಸಿದರು.