ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಕಾಮನ್‌ವೆಲ್ತ್ ಹಗರಣ: ಮತ್ತೆ ಕಲ್ಮಾಡಿ ವಿಚಾರಣೆ ಸಾಧ್ಯತೆ

Mainashree
Updated On : 6 Jun 2013, 3:43 am

ನವದೆಹಲಿ: ಕಾಮನ್‌ವೆಲ್ತ್ ಕ್ರೀಡಾ ಹಗರಣಕ್ಕೆ ಸಂಬಂಧಿಸಿದಂತೆ ಕಾಮನ್‌ವೆಲ್ತ್ ಗೇಮ್ಸ್ ಸಂಘಟನಾ ಸಮಿತಿಯ ಮಾಜಿ ಅಧ್ಯಕ್ಷ ಸುರೇಶ್ ಕಲ್ಮಾಡಿ ಅವರನ್ನು ಕೇಂದ್ರ ತನಿಖಾ ತಂಡ (ಸಿಬಿಐ) ಮತ್ತೊಮ್ಮೆ ವಿಚಾರಣೆಗೊಳಪಡಿಸುವ ಸಾಧ್ಯತೆ ಇದೆ.

2010ರಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಸುಮಾರು 70 ಕೋಟಿಯಷ್ಟು ಹಗರಣ ನಡೆದಿತ್ತು. ಈ ಸಂಬಂಧ ಸಿಬಿಐ ಕಳೆದ ವರ್ಷ ಸುರೇಶ ಕಲ್ಮಾಡಿ ಸೇರಿದಂತೆ ಸಮಿತಿಯ ಹಿರಿಯ ಅಧಿಕಾರಿಗಳ ಮೇಲೆ ಕೇಸು ದಾಖಲಿಸಿತ್ತು.

ತನಿಖೆ ಚುರುಕುಗೊಳಿಸಿರುವ ಸಿಬಿಐ ಈ ವಾರದಲ್ಲೇ ಸುರೇಶ್ ಕಲ್ಮಾಡಿ ಅವರನ್ನು ಮತ್ತೊಮ್ಮೆ ವಿಚಾರಣೆಗೊಳಪಡಿಸಲಿದೆ ಎಂದು ಮೂಲಗಳು ತಿಳಿಸಿವೆ.

2010ರಲ್ಲಿ ನಡೆದ ಕಾಮನ್‌ವೆಲ್ತ್‌ಗೇಮ್ಸ್‌ಗಾಗಿ ಟೈಮಿಂಗ್, ಸ್ಟೋರಿಂಗ್ ಮತ್ತು ರಿಸಲ್ಟ್ ವ್ಯವಸ್ಥೆಯನ್ನು ಅಳವಡಿಸಲು ಸ್ವಿಜರ್‌ಲೆಂಡ್‌ನ ಒಮೆಗಾ ಸಂಸ್ಥೆಗೆ ಹೆಚ್ಚುವರಿ ಮೊತ್ತ ತೋರಿಸಿ ಗುತ್ತಿಗೆ ನೀಡಲಾಗಿತ್ತು. ಇದರಿಂದ ಸರ್ಕಾರಕ್ಕೆ 70 ಕೋಟಿ ನಷ್ಟವುಂಟಾಗಿತ್ತು.

ಈ ಸಂಬಂಧ ತನಿಖೆ ನಡೆಸಿದ ಸಿಬಿಐ ಕಲ್ಮಾಡಿ ಸೇರಿದಂತೆ ಇತರೆ 9 ಮಂದಿ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement