ಡಿಎಸ್‌ಪಿ ಹತ್ಯೆ: ಎರಡನೇ ಚಾರ್ಜ್‌ಶೀಟ್‌ನಲ್ಲೂ ರಾಜಾಭಯ್ಯಾ ಹೆಸರಿಲ್ಲ
ಲಖನೌ: ಕುಂದಾ ಗ್ರಾಮದ ಡಿಎಸ್‌ಪಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ತನಿಖಾ ತಂಡ(ಸಿಬಿಐ) ಶುಕ್ರವಾರ ಲಖನೌ ನ್ಯಾಯಾಲಯಕ್ಕೆ ಎರಡನೇ ಚಾರ್ಜ್‌ಶೀಟ್ ಸಲ್ಲಿಸಿದ್ದು, ಈ ಬಾರಿಯು ಮಾಜಿ ಸಚಿವ ರಘುರಾಜ್ ಪ್ರತಾಪ್ ಸಿಂಗ್ ಅಲಿಯಾಸ್ ರಾಜಭಯ್ಯಾ ಅವರ ಹೆಸರನ್ನು ಪ್ರಸ್ತಾಪಿಸಿಲ್ಲ.
ರಾಜಭಯ್ಯಾ ವಿರುದ್ಧ ಸರಿಯಾಗಿ ಸಾಕ್ಷಿಗಳು ಲಭ್ಯವಾಗದ ಕಾರಣ ಎರಡನೇ ಚಾರ್ಜ್‌ಶೀಟ್‌ನಲ್ಲಿ ಅವರ ಹೆಸರನ್ನು ಕೈಬಿಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ತೀವ್ರ ಕುತೂಹಲ ಕೆರಳಿಸಿರುವ ಉತ್ತರ ಪ್ರದೇಶದ ಡಿವೈಎಸ್‌ಪಿ ಜಿಯಾ ಉಲ್ ಹಕ್ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ರಾಜಾಭಯ್ಯಾ ಅವರನ್ನು ಸುಳ್ಳು ಪತ್ತೆ ಪರೀಕ್ಷೆಗೊಳಪಡಿಸಲು ಸಿಬಿಐ ಅನುಮತಿ ಕೇಳಿದ್ದಾರೆ.
ರಾಜಾಭಯ್ಯಾ ಅವರನ್ನು ಈಗಾಗಲೇ ಪ್ರಾಥಮಿಕ ತನಿಖೆಗೊಳಪಡಿಸಿರುವ ಸಿಬಿಐ ಅಧಿಕಾರಿಗಳು, ಮತ್ತಷ್ಟು ಸಾಕ್ಷಿಗಳಿಗಾಗಿ ಅವರನ್ನು ಈ ಪರೀಕ್ಷೆಗೆ ಒಳಪಡಿಸಬೇಕು ಎಂದು ನ್ಯಾಯಾಲಯದ ಬಳಿ ಮನವಿ ಸಲ್ಲಿಸಿದ್ದಾರೆ. ಕಳೆದ ಮೇ ತಿಂಗಳಲ್ಲಿ ರಾಜಾಭಯ್ಯಾ ಅವರನ್ನು 20 ಗಂಟೆಗಳ ಕಾಲವಿಚಾರಣೆ ನಡೆಸಿದ್ದ ಸಿಬಿಐ ಅಧಿಕಾರಿಗಳಿಗೆ ಯಾವುದೇ ಪ್ರಮುಖ ಸಾಕ್ಷಿಗಳು ಲಭ್ಯವಾಗಿರಲಿಲ್ಲ.