ಪ್ರಪಾತಕ್ಕುರುಳಿದ ಬಸ್: 14 ಸಾವು
ಹಿಮಾಚಲ ಪ್ರದೇಶದ ಸಿರ್ಮೂರ್ ಜಿಲ್ಲೆಯ ತೆಹಸಿಲ್ನ ಸಂಗಢ್ ಬಳಿ ಬಸ್ಸೊಂದು 500 ಅಡಿ ಆಳದ ಪ್ರಪಾತಕ್ಕೆ ಉರುಳಿಬಿದ್ದಿದ್ದು,
ಶಿಮ್ಲಾ: ಹಿಮಾಚಲ ಪ್ರದೇಶದ ಸಿರ್ಮೂರ್ ಜಿಲ್ಲೆಯ ತೆಹಸಿಲ್ನ ಸಂಗಢ್ ಬಳಿ ಬಸ್ಸೊಂದು 500 ಅಡಿ ಆಳದ ಪ್ರಪಾತಕ್ಕೆ ಉರುಳಿಬಿದ್ದಿದ್ದು, ಘಟನೆಯಲ್ಲಿ 18 ಮಂದಿ ಮೃತಪಟ್ಟಿದ್ದಾರೆ ಮತ್ತು 14 ಜನ ತೀವ್ರವಾಗಿ ಗಾಯಗೊಂಡಿದ್ದಾರೆ.
ಈವರಗೆ ಎಲ್ಲ ಮೃತ ದೇಹಗಳನ್ನು ವಶ ಪಡಿಸಿಕೊಳ್ಳಲಾಗಿದೆ ಮತ್ತು ಗಾಯಗೊಂಡವರನ್ನು ಸೋಲನ್ ಮತ್ತು ರಾಜಗಢದಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸಿರ್ಮೂರ್ ಪೊಲೀಸ್ ವರಿಷ್ಠಾಧಿಕಾರಿ ಸುಮೇಧ್ ದ್ವಿವೇದಿ ಅವರು ದೂರವಾಣಿ ಮೂಲಕ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಇಂದು ಬೆಳಗ್ಗೆ 7 ಗಂಟೆಯ ಸುಮಾರಿಗೆ ಈ ಅಪಘಾತ ಸಂಭವಿಸಿದ್ದು, ಪುನರ್ಧರ್ದಿಂದ ಸೋಲನ್ಗೆ 35 ಪ್ರಯಾಣಿಕರನ್ನು ಕೊಂಡೊಯ್ಯುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಬಸ್ ಪ್ರಪಾತಕ್ಕೆ ಉರುಳಿದೆ ಎಂದು ಸುಮೇಧ್ ಹೇಳಿದ್ದಾರೆ.