ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಆಡ್ವಾಣಿ ನಿವಾಸದ ಮುಂದೆ ಮೋದಿ ಬೆಂಬಲಿಗರ ಪ್ರತಿಭಟನೆ

ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಗೆ 2014ರ ಲೋಕಸಭಾ ಚುನಾವಣೆಯ ನೇತೃತ್ವ ವಹಿಸುವುದಕ್ಕೆ..

Lingaraj Badiger
Updated On : 8 Jun 2013, 3:55 am

ನವದೆಹಲಿ: ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಗೆ 2014ರ ಲೋಕಸಭಾ ಚುನಾವಣೆಯ ನೇತೃತ್ವ ವಹಿಸುವುದಕ್ಕೆ ಅಡ್ಡಗಾಲು ಹಾಕುತ್ತಿರುವ ಬಿಜೆಪಿ ಹಿರಿಯ ನಾಯಕ ಎಲ್.ಕೆ.ಆಡ್ವಾಣಿ ಅವರ ದೆಹಲಿ ನಿವಾಸದ ಮುಂದೆ ಮೋದಿ ಬೆಂಬಲಿಗರು ಶನಿವಾರ ಪ್ರತಿಭಟನೆ ನಡೆಸುತ್ತಿದ್ದಾರೆ.

'ನರೇಂದ್ರ ಮೋದಿ ಸೇನೆ' ಎಂಬ ಬ್ಯಾನರ್‌ನೊಂದಿಗೆ ಪೃಥ್ವಿರಾಜ್ ರಸ್ತೆಯಲ್ಲಿರುವ ಆಡ್ವಾಣಿ ಅವರ ನಿವಾಸದ ಮುಂದೆ ಮೋದಿ ಪರ ಹಾಗೂ ಆಡ್ವಾಣಿ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾರೆ.

ನರೇಂದ್ರ ಮೋದಿ ಜಿಂದಾಬಾದ್ ಹಾಗೂ ಮೋದಿಯನ್ನು ಪ್ರಧಾನಿ ಅಭ್ಯರ್ಥಿ ಮಾಡಿ ಎಂಬ ಘೋಷಣೆಗಳೊಂದಿಗೆ ಮೋದಿ ಬೆಂಬಲಿಗರ ಪ್ರತಿಭಟನೆ ನಡೆಯುತ್ತಿದೆ.

ಮೋದಿ ಅವರಿಗೆ ಪಕ್ಷದ ನೇತೃತ್ವ ವಹಿಸಿಕೊಳ್ಳಲು ಆಡ್ವಾಣಿ ಸಹಕರಿಸಬೇಕು ಮತ್ತು ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಅವರು ಘೋಷಿಸಬೇಕು ಎಂಬ ಕಾರಣಕ್ಕೆ ನಾವು ಇಲ್ಲಿಗೆ ಬಂದು ಪ್ರತಿಭಟಿಸುತ್ತಿರುವುದಾಗಿ ಪ್ರತಿಭಟನಾಕಾರರು ತಿಳಿಸಿದ್ದಾರೆ.

ಈ ಮಧ್ಯೆ, ಆಡ್ವಾಣಿ ಅವರ ನಿವಾಸದ ಮುಂದೆ ಪ್ರತಿಭಟಿಸುತ್ತಿರುವ ಪ್ರತಿಭಟನಾಕಾರರಿಗೂ ಮತ್ತು ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಬಿಜೆಪಿ ನಾಯಕ ಶಹನವಾಜ್ ಹುಸೇನ್ ಅವರು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement