ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

9 ವರ್ಷಗಳಿಂದ ಪ್ರಧಾನಿಯ ವಿಮಾನ ಪ್ರಯಾಣದ ವೆಚ್ಚ 642 ಕೋಟಿ

ಕಳೆದ 9 ವರ್ಷಗಳಿಂದ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರ ವಿಮಾನ ಪ್ರಯಾಣದ ವೆಚ್ಚ 642 ಕೋಟಿ...

Mainashree
Updated On : 9 Jun 2013, 12:27 pm

ನವದೆಹಲಿ: ಕಳೆದ 9 ವರ್ಷಗಳಿಂದ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರ ವಿಮಾನ ಪ್ರಯಾಣದ ವೆಚ್ಚ 642 ಕೋಟಿ ಎಂದು ಮೂಲಗಳು ತಿಳಿಸಿವೆ.

ಮಾಹಿತಿ ಹಕ್ಕು ಕಾಯ್ದೆ ಅಡಿ ಪ್ರಧಾನಿಮಂತ್ರಿ ಕಛೇರಿ ಮಾಹಿತಿ ನೀಡಿದ್ದು, ಕಳೆದ ಒಂಭತ್ತು ವರ್ಷಗಳಿಂದ ಮನಮೋಹನ್ ಸಿಂಗ್ ಅವರ ವಿಮಾನದ ಪ್ರಯಾಣಕ್ಕೆ 642 ಕೋಟಿ ವ್ಯಯಿಸಲಾಗಿದೆ ಎಂದು ತಿಳಿದು ಬಂದಿದೆ.

2004ರಲ್ಲಿ ಪ್ರಧಾನಿಯಾದಾಗಿನಿಂದ ಇಲ್ಲಿಯವರೆಗೆ ಸಿಂಗ್ ಅವರು 67 ಬಾರಿ ವಿಮಾನದಲ್ಲಿ ಪ್ರಯಾಣಿಸಿದ್ದಾರೆ. ಇದರ ಒಟ್ಟು ವೆಚ್ಚ 642.45 ಕೋಟಿಯಾಗಿದೆ.

ಕಳೆದ ವರ್ಷ ಮಾಹಿತಿ ಹಕ್ಕು ಕಾಯ್ದೆ ಅಡಿ ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟಿಲ್ ಅವರು 5 ವರ್ಷಗಳಿಂದ ವಿದೇಶಕ್ಕೆ ವಿಮಾನ ಪ್ರಯಾಣ ಕೈಗೊಂಡಿದ್ದರ ವೆಚ್ಚ 223 ಕೋಟಿಯಾಗಿತ್ತು.

ಈ ಬಾರಿ ಪ್ರತಿಭಾ ಪಾಟಿಲ್ ಅವರನ್ನು ಪ್ರಧಾನಿ ಸಿಂಗ್ ಅವರು ಹಿಮ್ಮೆಟ್ಟಿದ್ದಾರೆ. 9 ವರ್ಷಗಳಿಂದ ಪ್ರಧಾನಿ ಅವರ ವಿದೇಶಿ ಪ್ರವಾಸಕ್ಕೆ 642 ಕೋಟಿ ಸರ್ಕಾರದ ಹಣ ವ್ಯಯಿಸಲಾಗಿದೆ.

7 ದಿನಗಳ ಕಾಲ ಮೆಕ್ಸಿಕೋ ಮತ್ತು ಬ್ರೆಜಿಲ್‌ನಲ್ಲಿ ನಡೆದ 2012 ಜಿ-20 ಶೃಗಸಭೆಯಲ್ಲಿ ಭಾಗವಹಿಸಿದ್ದ ಪ್ರಧಾನಿ ಅವರ ವಿಮಾನ ಪ್ರಯಾಣದ ವೆಚ್ಚ 26.94 ಕೋಟಿ. 2010ರಲ್ಲಿ ವಾಷಿಂಗ್‌ಟನ್‌ನಲ್ಲಿ ನಡೆದ ಬ್ರಿಕ್ ಶೃಂಗಸಭೆಯಲ್ಲಿ ಪಾಲ್ಗೊಂಡಾಗ 22.70 ಕೋಟಿ ವ್ಯಯಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement