ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಕಳಂಕಿತ ಆಟಗಾರರನ್ನು ಹೊರಹಾಕಲು ಇದೊಂದು ಸುಸಂದರ್ಭ: ನಿರಾಜ್ ಕುಮಾರ್

ಸ್ಪಾಟ್ ಫಿಕ್ಸಿಂಗ್‌ನಂತಹ ಪ್ರಕರಣಗಳಿಂದ ಕ್ರಿಕೆಟ್ ಆಟಕ್ಕೆ ಕಳಂಕ ಅಂಟಿಕೊಂಡಿದೆ ವಿನಃ ಕ್ರಿಕೆಟ್ ಒಂದು ಉತ್ತಮ ಕ್ರೀಡೆಯಾಗಿದ್ದು...

Vishwanath S
Updated On : 9 Jun 2013, 7:03 am

ನವದೆಹಲಿ: ಸ್ಪಾಟ್ ಫಿಕ್ಸಿಂಗ್‌ನಂತಹ ಪ್ರಕರಣಗಳಿಂದ ಕ್ರಿಕೆಟ್ ಆಟಕ್ಕೆ ಕಳಂಕ ಅಂಟಿಕೊಂಡಿದೆ ವಿನಃ ಕ್ರಿಕೆಟ್ ಒಂದು ಉತ್ತಮ ಕ್ರೀಡೆಯಾಗಿದ್ದು, ಐಪಿಎಲ್‌ನಲ್ಲಿ ಸ್ಪಾಟ್ ಫಿಕ್ಸಿಂಗ್ ನಡೆಸಿದ ಕಳಂಕಿತ ಆಟಗಾರರನ್ನು ತಂಡದಿಂದ ಹೊರಹಾಕಲು ಇದೊಂದು ಸುಸಂದರ್ಭ ಎಂದು ದೆಹಲಿ ಪೊಲೀಸ್ ಆಯುಕ್ತ ನಿರಾಜ್ ಕುಮಾರ್ ಅವರು ಭಾನುವಾರ ಅಭಿಪ್ರಾಯಪಟ್ಟಿದ್ದಾರೆ.

ಸ್ಪಾಟ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ದೆಹಲಿ ಪೊಲೀಸ್ ಆಯುಕ್ತ ನಿರಾಜ್ ಕುಮಾರ್, ಕೆಲವೊಂದು ಆಟಗಾರರು ತಮ್ಮ ಸ್ವಾರ್ಥಕ್ಕಾಗಿ ಕ್ರಿಕೆಟ್ ಆಟದಲ್ಲಿ ಸ್ಪಾಟ್ ಫಿಕ್ಸಿಂಗ್ ನಡೆಸಿದ್ದರ ಪರಿಣಾಮವಾಗಿ ಕ್ರಿಕೆಟ್ ಆಟ ಕಳಂಕಿತವಾಗಿದೆ ವಿನಃ ಕ್ರಿಕೆಟ್ ಒಂದು ಉತ್ತಮ ಕ್ರೀಡೆ ಎಂದು ಹೇಳಿದ್ದಾರೆ.

ಭಾರತದಲ್ಲಿ ಕ್ರಿಕೆಟ್‌ಗೆ ಉತ್ತಮ ಸ್ಥಾನವಿದೆ. ಇದನ್ನೆ ಬಂಡವಾಳ ಮಾಡಿಕೊಂಡಿರುವ ಕೆಲ ಆಟಗಾರರು ಸ್ಪಾಟ್ ಫಿಕ್ಸಿಂಗ್ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಕೋಟ್ಯಾಂತರ ಕ್ರಿಕೆಟ್ ಅಭಿಮಾನಿಗಳ ಮನಸ್ಸಿಗೆ ಘಾಸಿಯುಂಟು ಮಾಡಿದೆ. ಹೀಗಾಗಿ ಸ್ಪಾಟ್ ಫಿಕ್ಸಿಂಗ್‌ನಲ್ಲಿ ಭಾಗಿಯಾಗಿರುವ ಕಳಂಕಿತ ಆಟಗಾರರನ್ನು ತಂಡದಿಂದ ಹೊರಹಾಕಲು ಇದೊಂದು ಸುಸಂದರ್ಭ ಎಂದು ನಿರಾಜ್ ಕುಮಾರ್ ಬಿಸಿಸಿಐಗೆ ಸಲಹೆ ನೀಡಿದ್ದಾರೆ.

ಕ್ರಿಕೆಟ್ ಒಂದು 'ಜಂಟಲ್‌ಮ್ಯಾನ್‌' ಕ್ರೀಡೆಯಾಗಿದೆ. ಆದರೆ ಸ್ಪಾಟ್ ಫಿಕ್ಸಿಂಗ್ ಪ್ರಕರಣಗಳಿಂದಾಗಿ ಕ್ರಿಕೆಟ್ ಇಂದು ಅಪಖ್ಯಾತಿಗೆ ಸಿಲುಕಿದ್ದು, ಮುಂದಿನ ದಿನಗಳಲ್ಲಿ ಮತ್ತೆ ತನ್ನ ಹಿಂದಿನ ಪರಂಪರೆಗೆ ಮರಳುತ್ತದೆ ಎಂದು ಆಶಿಸಿದರು.

 ಐಪಿಎಲ್ ಸ್ಪಾಟ್ ಫಿಕ್ಸಿಂಗ್‌ನಲ್ಲಿ ಭಾಗಿಯಾಗಿರುವ 60 ಜನರನ್ನು ಈಗಾಗಲೆ ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದೇವೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement