ಪಶ್ಚಿಮ ಬಂಗಾಳ: ಬೆಳ್ಳಂಬೆಳಿಗ್ಗೆ ಮಾಜಿ ಶಾಸಕನ ಹತ್ಯೆ
ಬರ್ಡ್ವಾನ್: ಸಿಪಿಐ(ಎಂ)ನ ಮಾಜಿ ಶಾಸಕ ದಿಲಿಪ್ ಸರ್ಕಾರ್ ಅವರ ಮೇಲೆ ದುಷ್ಕರ್ಮಿಗಳ ಗುಂಪೊಂದು ಹಲ್ಲೆ ಮಾಡಿ ಪರಾರಿಯಾಗಿರುವ ಘಟನೆ ಭಾನುವಾರ ಬೆಳಿಗ್ಗೆ ನಡೆದಿದೆ.
ಪಶ್ಚಿಮ ಬಂಗಾಳದ ಮಾಜಿ ಶಾಸಕನ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ ಪರಿಣಾಮ ಶಾಸಕ ದಿಲಿಪ್ ಸರ್ಕಾರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
64 ವರ್ಷದ ದಿಲಿಪ್ ಅವರು ಇಂದು ಬೆಳಿಗ್ಗೆ ವಿಹಾರ ಮಾಡುತ್ತಿದ್ದಾಗ ನಾಲ್ವರು ದುಷ್ಕರ್ಮಿಗಳು ಬಂದು ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆಕೈಗೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.